ಬೇಕಾಗುವ ಸಾಮಗ್ರಿಗಳು
200 ಗ್ರಾಂ ಬಸಲೆ
200 ಗ್ರಾಂ ಕ್ಯಾಬೆಜ್
1 ಚಮಚ ರಸಮ್ ಪೌಡರ್
ಎಣ್ಣೆ
ಮೆಣಸಿಸ ಪೌಡರ್
ಅರಶಿನ, ಉಪ್ಪು, ಗರಂ ಮಸಾಲಾ
50 ಗ್ರಾಂ ಹಿಟ್ಟು
ಕತ್ತಿಸಿದ 1 ಈರುಳ್ಳಿ
2 ಟೊಮೇಟೊ
ತಯಾರಿಸುವ ವಿಧಾನ:
ಕತ್ತರಿಸಿದ ಬಸಲೆ ಮತ್ತು ಕ್ಯಾಬೆಜ್ ಅನ್ನು ಸೇರಿಸಿ, 20-30 ನಿಮಿಷ ಚೆನ್ನಾಗಿ ಕಲಸಿ ಆದರೆ ತುಂಬಾ ಮೆದುವಾಗಬಾರದು. ಆ ಮಿಶ್ರಣದಲ್ಲಿರುವ ನೀರನ್ನು ಹಿಂಡಿ ತೆಗೆದು ಅದಕ್ಕೆ ರಸಮ್ ಪೌಡರ್,
ಗರಂ ಮಸಾಲಾ ಪೌಡರ್, ಉಪ್ಪು, ಮೆಣಸಿನ ಪುಡಿ, ಅರಶಿನ ಸೇರಿಸಿ, ಚೆನ್ನಾಗಿ ಕಲಸಿ. ನಂತರ ಅದಕ್ಕೆ ಹಿಟ್ಟನ್ನು ಸೇರಿಸಿ, ಉಂಡೆ ಮಾಡಿ. ಇದನ್ನು ಎಣ್ಣೆಯಲ್ಲಿ ಬೂದಿ ಬಣ್ಣಕ್ಕೆ ತೆರಳುವ ತನಕ ಕಾಯಿಸಿ
ಬದಿಗಿಟ್ಟುಕೊಳ್ಳಿ. ಒಂದು ಪ್ರತ್ಯೇಕ ಬಣಾಲೆಯಲ್ಲಿ ಈರುಳ್ಳಿಯು ಅರಶಿನವಾಗುವವರೆಗೆ ಎಣ್ಣೆಯಲ್ಲಿ ಕಾಯಿಸಿ. ನಂತರ ಟೊಮೇಟೊ ಸೇರಿಸಿ ಮತ್ತೆ ಸ್ವಲ್ಪ ಹೊತ್ತು ಕಾಯಿಸಿ. ಈಗ ಉಪ್ಪು, ಮೆಣಸಿನ ಪುಡಿ ಸೇರಿಸಿ, ಪದಾರ್ಥವು ಸ್ವಲ್ಪ ದಪ್ಪವಾಗುವ ತನಕ ಬೇಯಿಸಿ. ಈಗ ಕೊಫ್ತಾ ರೆಡಿ.