ಬೇಕಾಗುವ ಸಾಮಾಗ್ರಿಗಳು : ಬದನೆ ಒಂದು ದೊಡ್ಡದು, ಈರುಳ್ಳಿ ಒಂದು ದೊಡ್ಡದು, ಎಣ್ಣೆ 4-5 ದೊಡ್ಡ ಚಮಚ, ತೆಂಗಿನ ತುರಿ 1/4 ಕಪ್, ಕೊತ್ತಂಬರಿ ಕಾಳು ಸಣ್ಣ ಚಮಚದಲ್ಲಿ 1/2, ಕಡಲೆ ಬೇಳೆ ಸಣ್ಣ ಚಮಚದಲ್ಲಿ 1/2 , ಮೆಂತೆ 1/4 ಸಣ್ಣ ಚಮಚ, ಒಣಮೆಣಸು 3-4, ಅರಶಿನ ಒಂದು ಚಿಟಿಕೆ, ಹುಳಿ ಒಂದು ಗೋಲಿ ಅಳತೆ, ಬೆಲ್ಲ ಒಂದು ಗೋಲಿ ಅಳತೆ.
ಪಾಕ ವಿಧಾನ : ಮೊದಲಿಗೆ ಬದನೆಯನ್ನು ತೊಳೆದು ದೊಡ್ಡಗಾತ್ರದ ತುಂಡುಗಳನ್ನಾಗಿಸಿಕೊಳ್ಳಿ. ಈರುಳ್ಳಿಯನ್ನು ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ. ಮೇಲೆ ಹೇಳಿದ ಸಾಮಾಗ್ರಿಗಳನ್ನು ನುಣ್ಣೆಗೆ ಅರೆದು ಇಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಹಾಕಿ ಕಾದ ಬಳಿಕ ಈರುಳ್ಳಿ ಮತ್ತು ಬದನೆಯನ್ನು ಹಾಕಿ. ಕೆಂಪಗಾದ ಬಳಿಕ ಮಸಾಲೆ ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಒಗ್ಗರಣೆ ಮಾಡಿ. ಎಣ್ಣೆಗಾಯಿ ರೆಡಿ.