ಬೇಕಾಗುವ ಸಾಮಾಗ್ರಿಗಳು :
ಕಡ್ಲೆ ಹಿಟ್ಟು ಅರ್ಧ ಕಪ್, ಅಕ್ಕಿಹಿಟ್ಟು ಒಂದು ದೊಡ್ಡ ಚಮಚ, ಕೆಂಪು ಮೆಣಸಿನ ಹುಡಿ ಒಂದು ದೊಡ್ಡ ಚಮಚ, ಉಪ್ಪು ರುಚಿಗೆ ಬೇಕಷ್ಟು, ಬೇಕಿದ್ದಲ್ಲಿ ಎರಡು ಚಿಟಿತೆ ಅಡುಗೆ ಸೋಡಾ, ಕರಿಯಲು ಎಣ್ಣೆ.
ಪಾಕ ವಿಧಾನ : ಬದನೆಯನ್ನು ಚೆನ್ನಾಗಿ ತೊಳೆದು ತೆಳುವಾದ ತುಂಡುಮಾಡಿ ನೀರಿನಲ್ಲಿ ಹಾಕಿಡಿ. ನಂತರ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಹುಡಿ, ಉಪ್ಪು ಎಲ್ಲವನ್ನು ಸೇರಿಸಿ ಬೇಕಷ್ಟೆ ನೀರು ಸೇರಿಸಿ ಚೆನ್ನಾಗಿ ಬೆರೆಸಬೇಕು. ಈ ಹಿಟ್ಟಿನಲ್ಲಿ ಬದನೆಯನ್ನು ಮುಳುಗಿಸಿ ಎಣ್ಣೆಯಲ್ಲಿ ಕರಿಯಿರಿ. ಬಿಸಿಬಿಸಿ ಸವಿದರೆ ಚೆನ್ನಾಗಿರುತ್ತದೆ.
(- ತುಳಸಿ ಬಜ್ಪೆ )