ಬೇಕಾಗುವ ಸಾಮಾಗ್ರಿಗಳು : ಬದನೆ ಕಾಯಿ ಎರಡು, ಹುಣಸೆ ಹಣ್ಣು ಗೋಲಿ ಗಾತ್ರದ್ದು, ರುಚಿಗೆ ಬೇಕಷ್ಟು ಉಪ್ಪು, ಬೆಲ್ಲ ಒಂದು ಗೋಲಿ ಅಳತೆ, ಸಾರಿನ ಹುಡಿ ಎರಡು ದೊಡ್ಡ ಚಮಚ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು.
ಪಾಕ ವಿಧಾನ : ಬದನೆಯನ್ನು ಚೆನ್ನಾಗಿ ತೊಳೆದು ತೆಳುವಾಗಿ ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿ ಅದಕ್ಕೆ ಬದನೆ ಸೇರಿಸಿ ಹುರಿಯಿರಿ. ನಂತರ ಉಪ್ಪು ಹುಳಿ ಬೆಲ್ಲ ಹಾಕಿ ಸಾರಿನಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲವೂ ಹೊಂದಿಕೊಂಡ ಬಳಿಕ ಒಲೆಯಿಂದ ಕೆಳಗಿರಿಸಿ.