ಬೇಕಾಗುವ ಸಾಮಾಗ್ರಿಗಳು : ಗೋದಿ ಹಿಟ್ಟು, ಮೈದಾ ಹಿಟ್ಟು, ಪಾಲಕ ಸೊಪ್ಪು, ಕ್ಯಾರೆಟ್, ಬಿಟ್ರೂಟ್, ಹಸಿಮೆಣಸು, ಮೆಣಸಿನ ಪುಡಿ.
ಮಾಡುವ ವಿಧಾನ : ಗೋದಿ ಮತ್ತು ಮೈದಾ ಹಿಟ್ಟು ಮಿಶ್ರಣ ಮಾಡಿ, ಪಾಲಕ ಮತ್ತು ಹಸಿಮೆಣಸು ಮೊದಲಿಗೆ ಬೇಯಿಸಿ ನಂತರ ಅದನ್ನು ರುಬ್ಬಿಕೊಳ್ಳಿ. ತರಕಾರಿ ಮತ್ತು ಮೆಣಸು ಸೇರಿಸಿ ಬೇಯಿಸಿ ಮತ್ತು ಎಲ್ಲಾವನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ. ಅದೆ ತರಹ ಬಿಟ್ರೂಟ್ ಬೇಯಿಸಿ ಅದಕ್ಕೆ ಸ್ವಲ್ಪ ಮೆಣಸಿನ ಪುಡಿ ಸೇರಿಸಿಕೊಳ್ಳಿ. ಕಲಸಿದ ಗೋದಿ ಮತ್ತು ಮೈದಾ ಹಿಟ್ಟಿನ ಮಿಶ್ರಣವನ್ನು ಸರಿಯಾಗಿ 3 ಭಾಗಗಳಾಗಿ ಮಾಡಿಕೊಳ್ಳಿ. ಜಡೆ ತರಹ ಅದನ್ನು ಹೆಣೆದುಕೊಳ್ಳಿ. ಎಲ್ಲಾವನ್ನು ಚೆನ್ನಾಗಿ ಲಟ್ಟಿಸಿಕೊಂಡು ಬೇಯಿಸಿ.