ಬೇಕಾಗುವ ಸಾಮಾನು : ಒಂದು ಬಾಟ್ಟಲು ತೆಂಗಿನ ತುರಿ, ಕಡಲೆ ಒಂದು ಬಾಟ್ಟಲು, ಹುರಿಗಡಲೆ 3/4 ಬಾಟ್ಟಲು, ಹುಣಸೆ ಹಣ್ಣು, ಹಸಿ ಮೆಣಸಿನಕಾಯಿ 5, ಕೊತ್ತಂಬರಿ 4 ಕಡ್ಡಿ, ಪುದಿನಾ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಒಂದು ಚಮಚ, ಸಾಸಿವೆ ಸ್ವಲ್ಪ ಕರಿಬೇವು.
ಮಾಡುವ ವಿಧಾನ : ತೆಂಗಿನ ತುರಿ ಮತ್ತು ಕಡಲೆಯನ್ನು ಸ್ವಲ್ಪ ಹುರಿದುಕೊಳ್ಳಿ, ಕೊತ್ತಂಬರಿ, ಹಸಿ ಮೆಣಸಿನಕಾಯಿ ಪುದಿನಾ, ಹುಣಸೆ ಹಣ್ಣು, ಉಪ್ಪು ತೆಂಗಿನ ತುರಿ ಎಲ್ಲವನ್ನು ರುಬ್ಬಿಕೊಳ್ಳಿ.ಸಾಸಿವೆ ಕರಿಬೇವಿನ ಒಗ್ಗರಣೆ ಹಾಕಿ ಮಿಶ್ರಣಕ್ಕೆ ಸೇರಿಸಿ, ಪುದಿನಾ ಚಟ್ನಿ ರುಚಿ ನೋಡಲು ತಯಾರಾಗಿದೆ.