ಬೇಕಾಗುವ ಸಾಮಾಗ್ರಿಗಳು:
ಪಡವಲಕಾಯಿ ಅರ್ಧ ಕಿಲೋ
ಕಡಲೆ ಹಿಟ್ಟು ಎರಡು ಬಟ್ಟಲು
ಒಣ ಕೊಬ್ಬರಿ ತುರಿ ಸ್ವಲ್ಪ
ಶೇಂಗಾ ಬೀಜದ ಪುಡಿ ಸ್ವಲ್ಪ
ಹವೀಜ ಸ್ವಲ್ಪ
ಜೀರಿಗೆ ಒಗ್ಗರಣೆಗೆ
ಸಾಸಿವೆ ಒಗ್ಗರಣೆಗೆ
ಖಾರ ಅಗತ್ಯವಿದ್ದಷ್ಟು
ಉಪ್ಪು ಅಗತ್ಯವಿದ್ದಷ್ಟು
ಸಕ್ಕರೆ ಸ್ವಲ್ಪ
ಕೊತ್ತಂಬರಿ
ನಿಂಬೆಹಣ್ಣು
ಎಣ್ಣೆ ಒಗ್ಗರಣೆಗೆ
ಮಾಡುವ ವಿಧಾನ:
ಪಡವಲ ಕಾಯಿಯನ್ನು ಬಿಲ್ಲೆಯಂತೆ ಹೆಚ್ಚಿಕೊಳ್ಳಿ. ಕಡಲೆ ಬೇಳೆಯ ಉರುಟು ಹಿಟ್ಟನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಎಣ್ಣೆಯಲ್ಲಿ ಖಾರದ ಪುಡಿ, ಉಪ್ಪು, ಸಕ್ಕರೆ ಅರಿಸಿನ ಪುಡಿ, ನಿಂಬೆರಸ ಹಾಕಿ ಚೆನ್ನಾಗಿ ಕಲಿಸಿರಿ. ಆ ಮಿಶ್ರಣಕ್ಕೆ ಹವೀಜ, ಜೀರಿಗೆ, ಕೊಬ್ರಿ, ಶೇಂಗಾದ ಪುಡಿ ಸೇರಿಸಿ. ಕಡಲೆ ಹಿಟ್ಟಿನ ತುರಿಯನ್ನು ಅದರಲ್ಲಿ ಬೆರಿಸಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಸೇರಿಸಿ. ಅನಂತರ ಎಲ್ಲವನ್ನು ಕೂಡಿಸಿ, ಕಲಿಸಿ, ಆವಿಯಲ್ಲಿ ಬೇಯಿಸಿ ಒಗ್ಗರಣೆ ಹಾಕಿ. ಹೆಚ್ಚಿಕೊಂಡ ಪಡವಲ ಕಾಯಿಯ ಬಿಲ್ಲೆಯನ್ನು ಈ ಒಗ್ಗರಣೆಗೆ ಹಾಕಿ ಕಲೆಸಿದರೆ ಪಡವಲಕಾಯಿ ಪಲ್ಯ ರೆಡಿ.