"ಬೇಕಾಗುವ ಸಾಮಗ್ರಿ: 10 ಬೆಳ್ಳುಳ್ಳು ಚೂರುಗಳು, 7 ಕೆಂಪು ಮೆಣಸು, 8 ಟೊಮೇಟೋ, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ಒಂದು ಕ್ಯಾರೆಟ್, ಸಣ್ಣ ತುಂಡು ಶುಂಠಿ, ಎಣ್ಣೆ.
ಮಾಡುವ ವಿಧಾನ: ಒಂದು ಸ್ಪೂನ್‌ನಷ್ಟು ಎಣ್ಣೆಯನ್ನು ಬಾಣಲೆಗೆ ಹಾಕಿ. ಅದಕ್ಕೆ ಬೆಳ್ಳುಳ್ಳಿ, ಮೆಣಸನ್ನು ಹಾಕಿ. ಒಂದೆರಡು ನಿಮಿಷ ಕಳೆದ ಮೇಲೆ ಅದಕ್ಕೆ ಕ್ಯಾರೆಟ್, ಟೊಮೇಟೋಗಳ ಹೋಳುಗಳನ್ನು ಹಾಕಿ. ಏಳೆಂಟು ನಿಮಿಷಗಳ ಕಾಲ ಹಾಗೆಯೇ ಕಲಕುತ್ತಾ ಇಡಿ. ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಒಂದೆರಡು ನಿಮಿಷ ಹಾಗೇ ಬಿಡಿ. ನಂತರ ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಂತರ ಉಪ್ಪು ಹಾಗೂ ಶುಂಠಿಯನ್ನು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ಪೇಸ್ಟಿನಂತೆ ರುಬ್ಬಿ. ಟೊಮೇಟೋ ಕ್ಯಾರೆಟ್ ಚಟ್ನಿ ಸಿದ್ಧ.
"