ಬೇಕಾಗುವ ಸಾಮಗ್ರಿಗಳು:
ಆಪಲ್ ಟೊಮೇಟೊ 1/2 kg
ಕಿತ್ತಲೆ ಹಣ್ಣು 1
ಜೇನು ತುಪ್ಪ 2 ಚಮಚ
ಮೆಣಸು ಪುಡಿ ರುಚಿಗೆ ತಕ್ಕಷ್ಟು
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ 2 ಚಮಚ
ಮಾಡುವ ವಿಧಾನ:
ಟೊಮೇಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಕಿತ್ತಳೆ ಹಣ್ಣಿನ ರಸ ತೆಗೆದು ಅದನ್ನು ಬೇಯಿಸಿದ ಟೊಮೇಟೊಗೆ ಸೇರಿಸಿ ಮಿಶ್ರಣ ಮಾಡಿ. ನಂತರ ಅದಕ್ಕೆ ಜೇನು ತುಪ್ಪ, ಮೆಣಸುಪುಡಿ, ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ, ಉಪ್ಪನ್ನು ಹಾಕಿ ಇಳಿಸಿ. ಆರಿದ ಮೇಲೆ ಕುಡಿಯಲು ಕೊಡಿ.