Article Vegetarian %e0%b2%9f%e0%b3%8a%e0%b2%ae%e0%b3%87%e0%b2%9f%e0%b3%8a %e0%b2%b8%e0%b2%be%e0%b2%b0%e0%b3%81 107051900020_1.htm

Select Your Language

Notifications

webdunia
webdunia
webdunia
webdunia

ಟೊಮೇಟೊ ಸಾರು

ಟೊಮೇಟೊ ಸಾರು
vishnu
ಸುಲಭವಾಗಿ ಕಡಿಮೆ ಅವಧಿಯಲ್ಲಿ ಟೊಮೆಟೋ ಸಾರು ಮಾಡಿ ಬಡಿಸಬಹುದು.

ಬೇಕಾದ ಸಾಮಾಗ್ರಿಗಳು :
ತೊಗರಿಬೇಳೆ ಒಂದು ಕಪ್, ಉಪ್ಪು ರುಚಿಗೆ ಬೇಕಷ್ಟು, ಹುಣಸೆ ಹಣ್ಣು ಒಂದು ಗೋಲಿ ಅಳತೆ, ಬೆಲ್ಲ ಒಂದು ಗೋಲಿ ಅಳತೆ, ಇಂಗು ಚಿಟಿಕೆ, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಕರಿಬೇವು, ಸಾಸಿವೆ ಎಣ್ಣೆ,
ಸಾರಿನ ಪುಡಿ ಎರಡು ಟೇಬಲ್ ಚಮಚ

ಪಾಕ ವಿಧಾನ :
ಕುಕ್ಕರಿನಲ್ಲಿ ತೊಗರಿಬೇಳೆ ಬೇಯಿಸಿಟ್ಟುಕೊಳ್ಳಿ. ಹಣಸೆ ಹಣ್ಣನ್ನು ನೀರಿನಲ್ಲಿ ಹಾಕಿ ಕಿವುಚಿ ರಸ ತೆಗೆಯಿರಿ. ಈ ರಸಕ್ಕೆ ಉಪ್ಪು ಬೆಲ್ಲ ಟೊಮೆಟೋ ನೀರು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಇದಕ್ಕೆ ಬೆಂದ ತೊಗರಿ ಬೇಳೆ ಸೇರಿಸಿ. ಸಾರಿನ ಪುಡಿ ಹಾಕಿದ ಬಳಿಕ ಇಂಗು ಸೇರಿಸಿ. ಕುದಿ ಬಂದ ನಂತರ ಒಲೆಯಿಂದ ಇಳಿಸಿ. ತಕ್ಷಣ ಕತ್ತರಿಸಿದ ಕೊತ್ತಂಬರಿ ಸೊಪ್ಪು ಬೆರೆಸಿ. ಇದಾದ ಬಳಿಕೆ ಒಗ್ಗರಣೆ ಹಾಕಿ. ಘಮಘಮ ಸಾರು ಬಿಸಿಬಿಸಿಯಾಗಿ ಉಣ್ಣಲು ಚೆನ್ನಾಗಿರುತ್ತದೆ.

(- ತುಳಸಿ ಬಜ್ಪೆ)

Share this Story:

Follow Webdunia kannada