ಬೇಕಾಗುವ ಸಾಮಾಗ್ರಿಗಳು:
ಹೆಸರು ಬೇಳೆ - 1 ಕಪ್
ತುಪ್ಪ - 2 ಚಮಚ
ಸಾಸಿವೆ - 1 ಚಮಚ
ಶುಂಠಿ - ಸಣ್ಣ ತುಂಡು
ಹಸಿಮೆಣಸಿನಕಾಯಿ - 3-4
ಅರಶಿನ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ನೀರುಳ್ಳಿ - 2
ಮೆಣಸಿನ ಪುಡಿ - 1 ಚಮಚ
ತಯಾರಿಸುವ ವಿಧಾನ:
ಬೇಳೆಯನ್ನು ಚೆನ್ನಾಗಿ ತೊಳೆದು ಎರಡು ಗಂಟೆಗಳ ಕಾಲ ಬಿಸಿನೀರಿನಲ್ಲಿ ನೆನೆಸಿಡಿ.ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಸಾಸಿವೆ ಮತ್ತು ಇಂಗನ್ನು ಹಾಕಿ. ನಂತರ ಸಣ್ಣಗೆ ಹೆಚ್ಚಿದ ಶುಂಠಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬೆರೆಸಿ ನಂತರ ನೆನೆಸಿಟ್ಟ ಬೇಳೆಯನ್ನು ಸೇರಿಸಿ.ನಂತರ ಇದಕ್ಕೆ ಅರಶಿನಪುಡಿ, ಮೆಣಸಿನ ಪುಡಿ ಹಾಕಿ ಎರಡು ಲೋಟ ನೀರು ಹೀಕಿ ದಪ್ಪವಾಗುವವರೆಗೆ ಬೇಯಿಸಿ.ಕೊನೆಯಲ್ಲಿ ನೀರುಳ್ಳಿಯಿಂದ ಅಲಂಕರಿಸಿ.