ಬೇಕಾಗುವ ವಸ್ತುಗಳು: ಕ್ಯಾರೆಟ್ 250 ಗ್ರಾಂ,ಆಲೂಗಡ್ಡೆ 150 ಗ್ರಾಂ, ಈರುಳ್ಳಿ 100 ಗ್ರಾಂ ಕೊತ್ತಂಬರಿ ಸೊಪ್ಪು ಒಂದು ಚಿಕ್ಕ ಕಂತೆ, ಖಾರದ ಪುಡಿ 1 ಚಮಚ , ಚಾಟ್ ಮಸಾಲೆ ಪುಡಿ 1/2 ಚಮಚ.
ಮಾಡುವ ವಿಧಾನ : ಕ್ಯಾರೆಟ್ ಮತ್ತು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆಯ ಸಿಪ್ಪೆ ಸುಲಿದು ಪುಡಿ ಮಾಡಿ ಇಡಿ. ಕ್ಯಾರೆಟ್ ಜಜ್ಜಿ ತೆಗೆದಿಡಿ.
ಈರುಳ್ಳಿಯನ್ನು ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹಚ್ಚಿರಿ. ಜಜ್ಜಿದ ಕ್ಯಾರೆಟ್ ,ಪುಡಿ ಮಾಡಿದ ಆಲೂಗಡ್ಡೆ,ಸಣ್ಣಗೆ ಹಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಶ್ರಮಾಡಿರಿ.
ಇದಕ್ಕೆ ಖಾರದ ಪುಡಿ,ಚಾಟ್ ಮಸಾಲ ಪುಡಿ,ಮತ್ತು ಅಗತ್ಯವಿರುವಷ್ಟು ಉಪ್ಪಿನ ಹುಡಿ ಸೇರಿಸಿ ಕಲೆಸಿರಿ ,ಕಟ್ಲೆಟ್ ಆಕಾರಕ್ಕೆ ಹೂರಣವನ್ನು ಒತ್ತಿ ಎಣ್ಣೆಯಲ್ಲಿ ಕರಿಯಿರಿ.