ಬೇಕಾಗುವ ಸಾಮಾಗ್ರಿಗಳು:
ಕ್ಯಾಬೇಜ್ - 1
ನೀರುಳ್ಳಿ - 2
ಕಡಲೇಬೇಳೆ - ಸ್ವಲ್ಪ
ಜೀರಿಗೆ - ಸ್ವಲ್ಪ
ಓಮ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಪಾಕ ವಿಧಾನ:
ಕಡಲೇಬೇಳೆಯನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ಕ್ಯಾಬೇಜ್ ಮತ್ತು ನೀರುಳ್ಳಿಯನ್ನು ಸಣ್ಣದಾಗಿ ಹಚ್ಚಿ. ನೆನೆಸಿದ ಕಡಲೇಬೇಳೆಯನ್ನು ಚೆನ್ನಾಗಿ ರುಬ್ಬಿ, ಅದಕ್ಕೆ ಕ್ಯಾಬೇಜ್ ಹಾಗೂ ನೀರುಳ್ಳಿಯನ್ನು ಬೆರೆಸಿ. ಜೀರಿಗೆ, ಓಮ ಪುಡಿ ಮಾಡಿ ಉಪ್ಪು ಹಾಗೂ ಚಿಟಿಕೆ ಸೋಡಾ ಬೆರೆಸಿ ಚೆನ್ನಾಗಿ ಕಲಸಿ. ನಂತರ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ.