Select Your Language

Notifications

webdunia
webdunia
webdunia
webdunia

ಕ್ಯಾಬೆಜ್ ಮಂಚೂರಿ

ಕ್ಯಾಬೆಜ್ ಮಂಚೂರಿ
ಬೇಕಾಗುವ ಸಾಮಾಗ್ರಿಗಳು:

2 ಕಪ್ ತುರಿದ ಕ್ಯಾಬೆಜ್
2 ಕಪ್ ತುರಿದ ಕ್ಯಾರೆಟ್
1 ಕತ್ತರಿಸಿದ ಈರುಳ್ಳಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
2 ಚಮಚ ಮೈದಾ
ಎಣ್ಣೆ
ಉಪ್ಪು
1 ಚಮಚ ಮೆಣಸಿನ ಕಾಳು
1 ಚಮಚ ಸಕ್ಕರೆ
1 ಚಮಚ ಗೋಧಿ ಹಿಟ್ಟು

ವಿಧಾನ:

ಕ್ಯಾಬೆಜ್ ಮತ್ತು ಕ್ಯಾರೆಟ್ ಅನ್ನು ಮಿಕ್ಸ್ ಮಾಡಿ ಅದರಿಂದ ನೀರನ್ನು ಹಿಂಡಿ ತೆಗೆಯಿರಿ. ಈಗ ಒಂದು ತಟ್ಟೆಯಲ್ಲಿ ಕ್ಯಾಬೆಜ್ ಮತ್ತು ಕ್ಯಾರೆಟ್ ಅನ್ನು ಮಿಕ್ಸ್ ಮಾಡಿ 2 ಚಮಚ ಮೈದಾ ಮತ್ತು ಉಪ್ಪನ್ನು ಸೇರಿಸಿ. ಸಣ್ಣ ಉಂಡೆಗಳನ್ನು ಮಾಡಿ. ಬಣಾಲೆಯಲ್ಲಿ ಎಣ್ಣೆಯನ್ನು ಕುದಿಸಿ ಉಂಡೆಯನ್ನು ಕರಿದು ಬದಿಗಿಡಿ. ಈಗ ಮತ್ತೊಂದು ಬಣಾಲೆಯಲ್ಲಿ 2 ಚಮಚ ಎಣ್ಣೆಯನ್ನು ಕುದಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸು ಮತ್ತು ಈರುಳ್ಳಿಯನ್ನು ಸೇರಿಸಿ. ನೀರು, ಉಪ್ಪು, ಮೆಣಸಿನ ಕಾಳು, ಸಕ್ಕರೆಯನ್ನು ಸೇರಿಸಿ ಮತ್ತು ಕುದಿಸಿ. 1 ಚಮಚ ಗೋಧಿ ಹಿಟ್ಟನ್ನು ಅರ್ಧ ಕಪ್ ತಣ್ಣೀರಿನೊಂದಿಗೆ ಸೇರಿಸಿ ಚೆನ್ನಾಗಿ ಕಲಸಿ. ಕರಿದ ಉಂಡೆಯನ್ನು ನಿಧಾನವಾಗಿ ಇದಕ್ಕೆ ಸೇರಿಸಿ. ತರಕಾರಿ ಮಂಚೂರಿಯನ್ನು 3-4 ನಿಮಿಷಗಳವರೆಗೆ ಬೇಯಿಸಿ ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ.

Share this Story:

Follow Webdunia kannada