ಬೇಕಾಗುವ ಸಾಮಾಗ್ರಿ: ಕಿತ್ತಳೆ ಹಣ್ಣಿನ ಸಿಪ್ಪೆ, ಬೆಣ್ಣೆ, ಹುಣಸೆ ಹಣ್ಣಿನ ರಸ, ಅಚ್ಚಖಾರದ ಪುಡಿ, ಬೆಲ್ಲ, ಉಪ್ಪು, ಒಗ್ಗರಣೆಗೆ ಬೇಕಾದ ಸಾಮಾಗ್ರಿ.
ಮಾಡುವ ವಿಧಾನ: ಬಾಣಲೆಗೆ ಬೆಣ್ಣೆ ಹಾಕಿ ಕರಗಿಸಿದ ನಂತರ ಅದಕ್ಕೆ ಕಿತ್ತಳೆ ಸಿಪ್ಪೆ ಹಾಕಿ ಹುರಿಯಿರಿ. ಸ್ವಲ್ಪ ಬಾಡಿದ ನಂತರ ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ಒಗ್ಗರಣೆ ಮಾಡಿಕೊಳ್ಳಿ. ನಂತರ ಕಿತ್ತಳೆ ಸಿಪ್ಪೆ ಮತ್ತು ಹುಣಸೆಹಣ್ಣಿನ ರಸ ಸೇರಿಸಿ ಹುರಿಯಿರಿ. ಕೊನೆಗೆ ರುಚಿಗೆ ತಕ್ಕ ಉಪ್ಪು, ಅಚ್ಚ ಖಾರದ ಪುಡಿ, ಬೆಲ್ಲ ಸೇರಿಸಿ ಕೈಯಾಡಿಸಿ. ಇದೀಗ ಕಿತ್ತಳೆ ಸಿಪ್ಪೆ ಪಲ್ಯ ಸಿದ್ಧ.