ಬೇಕಾಗುವ ಸಾಮಾಗ್ರಿಗಳು : ಕಡ್ಲೆ 1/4 ಕಿಲೋ, ತೆಂಗಿನ ಕಾಯಿ ಒಂದು ಚಿಕ್ಕದು, ಉದ್ದಿನ ಬೇಳೆ ಮೂರು ಟಿ ಚಮಚ, ಕೊತ್ತಂಬರಿ ಕಾಳು ಒಂದೂವರೆ ಟಿ ಚಮಚ, 25 ಕೆಂಪು ಮೆಣಸು , ಇದಕ್ಕೆ ಬೇಕಿರುವಷ್ಟು ಹುಣಸೆ ಹಣ್ಣು, ಈರುಳ್ಳಿ 2 .
ಪಾಕ ವಿಧಾನ : ನೆನೆ ಹಾಕಿದ ಕಡ್ಲೆಯನ್ನು ಬೇಯಿಸಿ. ಬೆಂದಬಳಿಕ ಉಪ್ಪುಹಾಕಿ. ತುರಿದ ತೆಂಗಿನ ಕಾಯಿಯನ್ನು ಕೆಂಪಗೆ ಹುರಿಯಿರಿ. ಹಾಗೆಯೇ ಉದ್ದಿನ ಬೇಳೆ ಮತ್ತು ಕೊತ್ತಂಬರಿ ಕಾಳನ್ನು ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಹುರಿದ ಮೆಣಸು ಹಾಗೂ ಇವಕ್ಕೆ ಬೇಕಾದಷ್ಟು ಹುಣಸೆ ಹಣ್ಣು ಸೇವಿಸಿ ನುಣ್ಣನೆ ರುಬ್ಬಿ. ಬೇಯಿಸಿದ ಕಡ್ಲೆಗೆ ಮಸಾಲೆ ಸೇರಿಸಿ ಕುದಿಸಿ.