ಬೇಕಾಗುವ ವಸ್ತುಗಳು : ಮೈದಾ ಹಿಟ್ಟು 2 ಬಟ್ಟಲು ,ಹೆಸರು ಬೇಳೆ 1 ಬಟ್ಟಲು ,ಕಡಲೆ ಬೇಳೆ 1 ಬಟ್ಟಲು ನಿಂಬೆ ಹಮ್ಣಿ ಅರ್ಧ,ಜೀರೆಗ 1ಚಮಚೆ, ಚಾಟ್ ಮಸಾಲಾ 1/2 ಚಮಚ ,ಖಾರದ ಪುಡಿ ಅರ್ಧ ಚಮಚ ,ಇಂಗು ಒಂದು ಚಿಟಿಕೆ ಎಳ್ಳು 1 ಚಮಚ.
ಮಾಡುವ ವಿಧಾನ : ಹೆಸರು ಬೇಳೆ ಮತ್ತು ಕಡಲೆ ಬೇಳೆಯನ್ನು ಬೇರೆ ಬೇರೆಯಾಗಿ ಬೇಯಿಸಿ ,ಬೇಯಿಸಿದ ಬೇಳೆಗಳನ್ನು ಬೆರೆಸಿರಿ.
ಇದಕ್ಕೆ ನಿಂಬೆ ರಸ ,ಜೀರಿಗೆ ,ಚಾಟ್ ಮಸಾಲ , ಖಾರದ ಪುಡಿ ,ಇಂಗು ಮತ್ತು ರುಚಿಗೆ ಬೇಕಾಗಿರುವಷ್ಟು ಉಪ್ಪಿನ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ಉಂಡೆಗಳಂತೆ ಮಾಡಿ ಇಡಿ.
ಮೈದಾ ಹಿಟ್ಟಿಗೆ ತುಸು ಉಪ್ಪಿನ ಪುಡಿ, ನೀರು ಸೇರಿಸಿ ಕಲೆಸಿಕೊಂಡು ಸಮೋಸದ ಹದಕ್ಕೆ ಲಟ್ಟಿಸಿಕೊಳ್ಳಿ. ಒಳಗೆ ಬೇಳೆಯ ಉಂಡೆ ಇರಿಸಿ, ಹಿಟ್ಟಿನಿಂದ ಮುಚ್ಚಿರಿ. ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿಟೊಮೆಟೊ ಸಾಸ್ ಮತ್ತು ಹಸಿರು ಚಟ್ನಿಯೊಂದಿಗೆ ಬಿಸಿಬಿಸಿ ಸಮೋಸ ತಿಂದು ನೋಡಿ.