"ಬೇಕಾಗುವ ಸಾಮಗ್ರಿ: 250 ಗ್ರಾಂ ಎಲೆಕೋಸು, 100 ಗ್ರಾಂ ಕಡಲೆ ಬೇಳೆ, 200 ಗ್ರಾಂ ಗೋಧಿ ಹಿಟ್ಟು, 50 ಗ್ರಾಂ ಮೈದಾ ಹಿಟ್ಟು, ಒಂದು ಚಮಚ ಖಾರಪುಡಿ, ಅರ್ಧ ಚಮಚ ಚಾಟ್ ಮಸಾಲ ಪುಡಿ, ಅರ್ಧ ಕಂತೆ ಕೊತ್ತಂಬರಿ ಸೊಪ್ಪು, 5-6 ಚಮಚ ತೆಂಗಿನ ತುರಿ, ಎರ್ಧ ಚಮಚ ಉದ್ದಿನ ಬೇಳೆ, ಅರ್ಧ ಚಮಚ ಕಡ್ಲೆ ಬೇಳೆ, ಕರಿಯಲು ಎಣ್ಣೆ.
ಮಾಡುವ ವಿಧಾನ: ಗೋಧಿ ಹಿಟ್ಟಿಗೆ ಮೈದಾ ಹಿಟ್ಟು ಸೇರಿಸಿ ಸ್ವಲ್ಪ ಉಪ್ಪು ಮತ್ತು ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಎಲೆಕೋಸು ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಡಿ. ಕಡಲೇಬೇಳೆಯನ್ನು ಬೇಯಿಸಿ ಇಡಿ. ಒಲೆಯ ಮೇಲೆ ಬಾಣಲೆಯಿಟ್ಟು, ಒಂೆದೆರಡು ಚಮಚ ಎಣ್ಣೆ ಹಾಕಿ ಅದು ಕಾದಾಗ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಹೆಚ್ಚಿದ ಎಲೆಕೋಸನ್ನು ಸೇರಿಸಿ ಕಡಿಮೆ ಉರಿಯಲ್ಲಿ ಮೂರ್ನಾಲ್ಕು ನಿಮಿಷ ಬೇಯಿಸಿ. ಇದಕ್ಕೆ ಬೇಯಿಸಿದ ಕಡ್ಲೆಬೇಳೆ ಸೇರಿಸಿ ಮಗುಚಿ. ಖಾರದ ಪುಡಿ, ಚಾಟ್ ಮಸಾಲ ಪುಡಿ ಸೇರಿಸಿ ಒಂದೆರಡು ನಿಮಿಷ ಮಗಚುತ್ತಿದ್ದು, ನಂತರ ಒಲೆಯಿಂದ ಬಾಣಲೆ ಕೆಳಗಿಳಿಸಿ. ಇದಕ್ಕೆ ಹೆಚ್ಚಿದ ಕೊತ್ತಂಬರಿಸೊಪ್ಪು ತೆಂಗಿನ ತುರಿ ಸೇರಿಸಿ ಚೆನ್ನಾಗಿ ಕಲೆಸಿ. ಹಿಟ್ಟನ್ನು ಲಟ್ಟಿಸಿ ಅರ್ಧಕ್ಕೆ ಕತ್ತರಿಸಿ ಕೈಯಲ್ಲಿ ಲಕೋಟೆಯಂತೆ ಮಾಡಿ ಒಳಗೆ ಹೂರಣದ ಉಂಡೆ ತುಂಬಿ ಹಿಟ್ಟನ್ನು ಸೇರಿಸಿ ನಂತರ ಎಣ್ಣೆಯಲ್ಲಿ ಕರಿಯಿರಿ.
"