Article Vegetarian %e0%b2%89%e0%b2%a6%e0%b3%8d%e0%b2%a6%e0%b2%bf%e0%b2%a8 %e0%b2%ac%e0%b3%87%e0%b2%b3%e0%b3%86 %e0%b2%95%e0%b2%9a%e0%b3%8b%e0%b2%b0%e0%b2%bf 109061500100_1.htm

Daily Horoscope

Select Your Language

Notifications

webdunia
webdunia
webdunia
webdunia

ಉದ್ದಿನ ಬೇಳೆ ಕಚೋರಿ

ಸಸ್ಯಾಹಾರಿ ಅಡುಗೆ
ಬೇಕಾಗುವ ಸಾಮಗ್ರಿ: 50 ಗ್ರಾಂ ಉದ್ದಿನ ಬೇಳೆ, ರುಚಿಗೆ ತಕ್ಕಷ್ಟು ಗರಂಮಸಾಲ, 100 ಗ್ರಾಂ ಮೈದಾ ಹಿಟ್ಟು, ಕರಿಯಲು ಎಣ್ಣೆ, ಒಂದು ಚಮಚ ಮೆಣಸಿನ ಹುಡಿ.

ಮಾಡುವ ವಿಧಾನ: ಉದ್ದಿನ ಬೇಳೆಯನ್ನು ಐದಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ. ನಂತರ ನೀರನ್ನು ಬಸಿದು, ಉದ್ದಿನ ಬೇಳೆಯನ್ನು ಸ್ವಚ್ಛವಾದ ಹತ್ತಿಬಟ್ಟೆಯ ಮೇಲೆ ಹರವಿ ತೇವ ಬಸಿದುಹೋಗಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಇದಕ್ಕೆ ಉದ್ದಿನ ಬೇಳೆ ಹಾಕಿ ಹುರಿಯಿರಿ. ಮೆಣಸಿನಪುಡಿ, ಗರಂ ಮಸಾಲ ಪುಡಿ, ಸ್ವಲ್ಪ ಉಪ್ಪು ಸೇರಿಸಿ. ಮೈದಾ ಹಿಟ್ಟಿಗೆ ತುಸು ಉಪ್ಪು, ನೀರು ಸೇರಿಸಿ ಕಲಸಿ. ಸ್ವಲ್ಪ ಮಾತ್ರ ಲಟ್ಟಿಸಿಕೊಂಡು ಮಧ್ಯದಲ್ಲಿ ಒಂದು ಚಮಚೆಯಷ್ಟು ಹುರಿದ ಉದ್ದಿನ ಬೇಳೆಯನ್ನು ಸೇರಿಸಿ. ಲಟ್ಟಿಸಿದ ಹಿಟ್ಟನ್ನು ಮತ್ತೆ ಸೇರಿಸಿ ಹೂರಣ ಒಳಗಿರುವಂತೆ ಮಾಡಿ ಉಂಡೆ ಕಟ್ಟಿಕೊಳ್ಳಿ ಮತ್ತೆ ಮೆಲ್ಲಗೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada