ಬೇಕಾಗುವ ವಸ್ತುಗಳು: ಉದ್ದಿನ ಬೆಳೆ 50 ಗ್ರಾಂ, ಮೈದಾ ಹಿಟ್ಟು 100 ಗ್ರಾಂ ,ಮೆಣಸಿನ ಹುಡಿ 1 ಚಮಚ ,ಗರಂ ಮಸಾಲಾ ಪುಡಿ ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಮಾಡುವ ವಿಧಾನ : ಉದ್ದಿನ ಬೆಳೆಯನ್ನು ಐದಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಬಸಿಯಿರಿ.ಉದ್ದಿನ ಬೆಳೆಯನ್ನು ಸ್ವಚ್ಚವಾದ ಹತ್ತಿಯ ಬಟ್ಟೆಯ ಮೇಲೆ ಹರಡಿ ಹೆಚ್ಚುವರಿ ತೇವ ಹೋಗುವಂತೆ ಮಾಡಿ.ಬಾಣಲೆಯಲ್ಲಿ ತುಸು ಎಣ್ಣೆ ಹಾಕಿ ಕಾಯಿಸಿ.
ಇದಕ್ಕೆ ಉದ್ದಿನ ಬೆಳೆ ಹಾಕಿ ಹುರಿಯಿರಿ. ಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಮೈದಾ ಹಿಟ್ಟಿಗೆ ತುಸು ಉಪ್ಪು ಮತ್ತು ನೀರು ಸೇರಿಸಿ ಕಲೆಸಿಕೊಳ್ಳಿ
ಸ್ವಲ್ಪ ಮಾತ್ರ ಲಟ್ಟಿಸಿಕೊಂಡು ಮಧ್ಯದಲ್ಲಿ ಒಂದು ಚಮಚೆಯಷ್ಟು ಹುರಿದ ಉದ್ದಿನಬೆಳೆಯನ್ನು ಸೇರಿಸಿ. ಲಟ್ಟಿಸಿದ ಹಿಟ್ಟನ್ನು ಮತ್ತೆ ಸೇರಿಸಿ ಹೂರಣವು ಒಳಗಿರುವಂತೆ ಮಾಡಿ ಉಂಡೆ ಕಟ್ಟಿಕೊಳ್ಳಿ.ಮತ್ತೆ ಮೆಲ್ಲಗೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಿರಿ.