ಬೇಕಾಗುವ ಸಾಮಾಗ್ರಿ:
500 ಗ್ರಾಂ ದೊಡ್ಡ ಗಾತ್ರದ ಆಲೂಗಡ್ಡೆ
3 ಗ್ರಾಂ ಗರಂ ಮಸಾಲಾ
6 ಹಸಿರು ಮೆಣಸು
ಸಣ್ಣ ಶುಂಠಿ
1/4 ತುರಿದ ತೆಂಗಿನಕಾಯಿ
100 ಗ್ರಾಂ ಎಣ್ಣೆ
150 ಗ್ರಾಂ ಟೊಮೇಟೊ
ಸ್ವಲ್ಪ ಅರಶಿನ ಮತ್ತು ಉಪ್ಪು
ತಯಾರಿಸುವ ವಿಧಾನ:
ಆಲೂಗಡ್ಡೆಯ ಸಿಪ್ಪೆ ತೆಗೆದು, ಕತ್ತರಿಸಿ, ಉಪ್ಪು ನೀರಿನಲ್ಲಿ 10 ನಿಮಿಷ ನೆನೆಯಿಸಿಡಿ. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಸ್ವಲ್ಪ ಹೊತ್ತು ಗರಂ ಮಸಾಲಾ ಮತ್ತು ಶುಂಠಿಯನ್ನು ಹುರಿಯಿರಿ ನಂತರ
ಆಲೂಗಡ್ಡೆ, ಅರಶಿನವನ್ನು ಸೇರಿಸಿ ಬೇಯಿಸಿ. ಈಗ ತೆಂಗಿನ ಕಾಯಿ, ಮೆಣಸು, ಉಪ್ಪು ಸೇರಿಸಿ 10 ನಿಮಿಷ ಬೇಯಿಸಿ. ಅದು ಬೇಯುತ್ತಾ ಬಂದಂತೆ ಕತ್ತರಿಸಿಟ್ಟ ಟೊಮೇಟೊವನ್ನು ಸೇರಿಸಿ 2 ನಿಮಿಷ
ಬೇಯಿಸಿ. ರುಚಿಗಾಗಿ ಒಗ್ಗರಣೆಯನ್ನು ಸೇರಿಸಿ. ಊಟಕ್ಕೆ ರುಚಿಯಾದ ಚಾಪ್ಸ್ ಸಿದ್ದ.