ಬೇಕಾಗುವ ವಸ್ತುಗಳು: ಕಾಲು ಕಿಲೋ ಚಿಕ್ಕಗಾತ್ರದ ಆಲೂಗಡ್ಡೆ, ಒಂದು ಬಟ್ಟಲು ಮೊಸರು, ಒಂದು ಚಮಚ ಚಾಟ್ ಮಸಾಲಾ ಪುಡಿ, ಒಂದು ಚಮಚ ಜೀರಿಗೆ, 2- 3 ಹಸಿಮೆಣಸಿನಕಾಯಿ, ಒಂದು ಚಮಚ ಖಾರಪುಡಿ, ನಿಂಬೆಗಾತ್ರದಷ್ಟು ಹುಣಸೇಹಣ್ಣು, ಅರ್ಧಕಂತೆ ಪುದಿನ ಸೊಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಗೋಲಿಗಾತ್ರದ ಆಲೂಗಡ್ಡೆಗಳನ್ನು ಮೊದಲು ಸ್ವಲ್ಪ ಉಪ್ಪು ಸೇರಿಸಿದ ನೀರಿನಲ್ಲಿ ಬೇಯಿಸಿ ಸಿಪ್ಪೆ ಸುಲಿದುಕೊಳ್ಳಿ. ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಪುದಿನ, ಹುಣಸೆಹಣ್ಣು, ಉಪ್ಪು ಸೇರಿಸಿ ಚಟ್ನಿ ಮಾಡಿ. ಬೇಯಿಸಿ ಸಿಪ್ಪೆ ಸುಲಿದ ಆಲೂಗಡ್ಡೆಗಳನ್ನು ಇಡಿಯಾಗಿಯೇ ಮುಳ್ಳಿನ ಚಮಚದಿಂದ ಎಲ್ಲ ಬದಿಗಳಲ್ಲಿ ರಂಧ್ರಮಾಡಿ. ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆಗಳನ್ನು ಹೊಂಬಣ್ಣ ಬರುವವರೆಗೆ ಕರಿಯಿರಿ. ಒಂದು ತಟ್ಟೆಯಲ್ಲಿ ಕರಿದ ಆಲೂಗಡ್ಡೆಗಳನ್ನು ಹಾಕಿ, ಇದರ ಮೇಲೆ ಚಟ್ನಿಯನ್ನು ಹರಡಿ. ಕೊನೆಯಲ್ಲಿ ಮೊಸರು ಸೇರಿಸಿ ಖಾರದ ಪುಡಿ ಉದುರಿಸಿ. ಜೀರಿಗೆ ಹುರಿದು ಪುಡಿ ಮಾಡಿ ಉದುರಿಸಿ.