ಅಣಬೆ ಮಸಾಲೆ (Mushroom Masala)
ಬೇಕಾಗುವ ಸಾಮಾನುಗಳು:
1) 2 ಕಪ್ ಅಣಬೆ
2) 1 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ,
3) 1 ಕಪ್ ಟೊಮ್ಯಾಟೊ,
4) 2 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಮತ್ತು ಹಸಿ ಶುಂಠಿ,
5) 2 ಟೇಬಲ್ ಸ್ಪೂನ್ ಎಣ್ಣೆ,
6) 2 ಟೇಬಲ್ ಸ್ಪೂನ್ ಮಸಾಲ ಹುಡಿ ( ಚಿಕನ್ ಮಸಾಲ ),
7) ಉಪ್ಪು ರುಚಿಗೆ ತಕ್ಕಸ್ಟು,
8) 1/2 ಟೇಬಲ್ ಚಮಚ ಅರಶಿಣ ಹುಡಿ,
ಅಣಬೆ ಮಸಾಲೆ ಮಾಡುವ ವಿದಾನ:
1. ಒಲೆಯ ಮೇಲೆ ಪಾತ್ರೆ ಯನ್ನು ಇಟ್ಟು, ಅದಕ್ಕೆ ಎಣ್ಣೆ ಹಾಕಬೇಕು, ಎಣ್ಣೆ ಬಿಸಿ ಆದಮೇಲೆ, ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಮತ್ತು ಹಸಿ ಶುಂಠಿ ಯನ್ನು ಹಾಕಬೇಕು. ಚೆನ್ನಾಗಿ ಫ್ರೈ ಮಾಡಬೇಕು.
2. ನಂತರ ಇದಕ್ಕೆ ಟೊಮ್ಯಾಟೊ, ಹಾಗು ಕತ್ತರಿಸಿದ ಅಣಬೆ ತುಂಡುಗಳು ಜೊತೆಯಲ್ಲಿ ಅರಶಿಣವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಸಬೇಕು.
3. ಕೊನೆಯಲ್ಲಿ ರುಚಿಗೆ ತಕ್ಕಸ್ಟು ಉಪ್ಪು, ಮಸಾಲ ಹುಡಿ ಹಾಕಿ, 12 ರಿಂದ 15 ನಿಮಿಷ ಗಳ ಬೇಯಿಸಿದರೆ ಅಣಬೆ ಮಸಾಲ (Mushroom Masala) ಸಿದ್ದವಾಗುತದೆ