ಬಜ್ಜಿ ಮಾಡೇಬಿಡೋಣ ಬನ್ನಿ!
ಐದಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟ ಹೆಸರುಕಾಳನ್ನು ನೀರುಬೆರೆಸದೆ ಅದಿರದಿರಾಗಿ ರುಬ್ಬಿ. ಈ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಉಪ್ಪು, ಹಸಿಮೆಣಸಿಕಾಯಿ, ಕೊತ್ತಂಬರಿ ಸೊಪ್ಪು, ಹುಳಿಮೊಸರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಸ್ವಲ್ಪಸ್ವಲ್ಪವೇ ಹಿಟ್ಟನ್ನು ಬೇಕಾದ ಆಕಾರಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಬಿಡಿ. ಚಿನ್ನದ ಬಣ್ಣಕ್ಕೆ ತಿರುಗುತ್ತಲೇ ಬಜ್ಜಿ ಸಿದ್ಧ. ಎಣ್ಣೆಯಿಂದ ಹೊರತೆಗೆದು ಸ್ವಲ್ಪ ಹೊತ್ತು ಕಾಗದದ ಮೇಲಿಡಿ. ಕಾಗದ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
ಇದನ್ನು ಊಟದೊಟ್ಟಿಗೂ ನೆಂಜಿಕೊಳ್ಳಬಹುದು. ಸಾಯಂಕಾಲದ ತಿಂಡಿಯಾಗಿಯೂ ಬಳಸಬಹುದು. ಇದರೊಂದಿಗೆ ಕಾಯಿಚಟ್ನಿ ಮಾಡಿದರಂತೂ ಕಾಂಬಿನೇಶನ್ ಫಸ್ಟ್‌ಕ್ಲಾಸ್!