Select Your Language

Notifications

webdunia
webdunia
webdunia
webdunia

ಹಸಿರು ಮೆಣಸಿನಕಾಯಿ ಚಟ್ನಿ

ಹಸಿರು ಮೆಣಸಿನಕಾಯಿ ಚಟ್ನಿ
ಬೇಕಾಗುವ ಸಾಮಾನುಗಳು: ಕೊತ್ತಂಬರಿ ಸೊಪ್ಪು 2 ಕಂತೆ , ಹಸಿ ಮೆಣಸಿನ ಕಾಯಿ 3-4 ,ಪುದಿನಸೊಪ್ಪು 1 ಚಿಕ್ಕ ಕಂತೆ ,ಬೆಲ್ಲ 25 ಗ್ರಾಂ, ಹುರಿಗಡಲೆ ಅರ್ಧ ಬಟ್ಟಲು, ಬೆಳ್ಳುಳ್ಳಿ 1 ಗಡ್ಡೆ ,ರುಚಿಕೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕೊತಂಬರಿ , ಪುದಿನ ಸೊಪ್ಪನ್ನು ಬುಡ ಕಡಿದು ಸ್ವಚ್ಚವಾಗಿ ತೊಳೆದಿಡಿ ,ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿಡಿ. ಎಲ್ಲ ವಸ್ತುಗಳನ್ನು ಮಿಕ್ಸಿಗೆ ಅಥವಾ ಒರಳಿಗೆ ಹಾಕಿ ಚೆನ್ನಾಗಿ ರುಬ್ಬಿರಿ. ಚಟ್ನಿ ತೀರಾ ಗಟ್ಟಿಯಾಗಿರಬಾರದು ಅಥವಾ ನೀರಾಗಿಯೂ ಇರಬಾರದು ಅದರಂತೆ ನೋಡಿಕೊಳ್ಳಿ. ರೊಟ್ಟಿ ಜೊತೆಗೆ ಸೇವಿಸಿದಲ್ಲಿ ತುಂಬಾ ರುಚಿ.

Share this Story:

Follow Webdunia kannada