ಬೇಕಾಗುವ ಪದಾರ್ಥಗಳು: ಹಾಗಲ ಕಾಯಿ ಎಂಟು ಈರುಳ್ಳಿ ಮೂರು ಕಾರದ ಪುಡಿ ಎರಡು ಟೀಸ್ಪೂನ್ ಧನಿಯಾ ಪುಡಿ ಒಂದು ಟೀ ಸ್ಪೂನ್ ಜೀರಿಗೆ ಒಂದು ಟೀ ಸ್ಪೂನ್ ಅರಿಸಿಣ ಒಂದೊಂದು ಟೀಸ್ಪೂನ್ ಉಪ್ಪು , ಎಣ್ಣೆ ತಕ್ಕಷ್ಟು
ಮಾಡುವ ವಿಧಾನ ಪೀಲರ್ ಇಲ್ಲವೇ ಚಾಕು ಬಳಸಿ ಹಾಗಲ ಕಾಯಿಯ ಮೇಲ್ಭಾಗದ ಸಿಪ್ಪೆ ತೆಗೆದು ಅದರ ಮಧ್ಯೆ ಭಾಗದಲ್ಲಿ ಕತ್ತರಿಸಿ ಅದರಲ್ಲಿ ಬೀಜಗಳನ್ನು ತೆಗೆಯ ಬೇಕು. ಇದಕ್ಕೆ ಉಪ್ಪು, ಅರಿಸಿಣ ಹಾಕಿ ಒಂದು ಗಂಟೆಗಳ ಕಾಲ ನೆನಸಿಡಬೇಕು.
ಈರುಳ್ಳಿಯನ್ನು ಚೂರುಗಳಾಗಿ ಕತ್ತರಿಸಿ ಅದಕ್ಕೆ ಕಾರ , ಧನಿಯಾ ಪುಡಿ, ಜೀರಿಗೆ ಪುಡಿ ಸ್ವಲ್ಪ ಉಪ್ಪು ಸೇರಿಸಿ ಬೆರೆಸ ಬೇಕು. ಈ ಮಿಶ್ರಣವನ್ನು ಹಾಗಲ ಕಾಯಿ ಮಧ್ಯದಲ್ಲಿಟ್ಟು ಎಣ್ಣೆ ಹಾಕಿ ಡೀಪ್ ಫ್ರೈ ಮಾಡ ಬೇಕು. ಸ್ಪೈಸಿ ಹಾಗಲಕಾಯಿ ತಿನ್ನಲು ಸಿದ್ಧ.