ಬೆಂದ ಬಟಾಣಿ - ಎರಡು ಚಮಚೆ.,ಈರುಳ್ಳಿ ಚೂರುಗಳು ಸ್ವಲ್ಪ.ಅರಿಸಿನ ಸ್ವಲ್ಪ, ಅಚ್ಚ ಖಾರದ ಪುಡಿ ನಿಮ್ಮ ರುಚಿಗೆ ಅಗತ್ಯ ಇರುವಷ್ಟು ಆಮ್ಚೂರ್ ಪೌಡರ್ ( ಸಿದ್ಧ ಪಡಿಸಿರುವುದು ಅಂಗಡಿಯಲ್ಲಿ ದೊರಕುತ್ತದೆ) ಅರ್ಧ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು
ಹುರಿಯಲು ತುಪ್ಪ ಇಲ್ಲವೇ.. ಶುದ್ಧ ಎಣ್ಣೆ.
ಮಾಡುವ ವಿಧಾನ :
ಮೊದಲಿಗೆ ಕ್ಯಾಪ್ಸಿಕಮ್ ಚೆನ್ನಾಗಿ ತೊಳೆದು ತೊಟ್ಟು ಕತ್ತರಿಸ ಬೇಕು. ಬಳಿಕ ಅದನ್ನು ಬಿಸಿನೀರಿಗೆ ಹಾಕಿ ಬೇಯಿಸ ಬೇಕು. ನಂತರ ಅದನ್ನು ತಣಿಸ ಬೇಕು. ಆ ಬಳಿಕ ಈಗಾಗಲೇ ಬೇಯಿಸಿ ಸಿಪ್ಪೆ ತೆಗೆದ ಆಲೂ ಗಡ್ಡೆಯನ್ನು ಪುಡಿ ಮಾಡ ಬೇಕು. ಒಲೆಯ ಮೇಲೆ ಒಂದು ಪ್ಯಾನ್ ಇಲ್ಲವೇ ಬಾಣಲೆ ಇಟ್ಟು ಅದರಲ್ಲಿ ತುಪ್ಪ ಹಾಕಿ ಅದಕ್ಕೆ ಕತ್ತರಿಸಿಟ್ಟ ಈರುಳ್ಳಿ ಚೂರುಗಳನ್ನು ಹಾಗಿ ತಿಳಿ ಕಂಡು ಬಣ್ಣ ಬರುವವರೆಗೂ ಹುರಿಯ ಬೇಕು.