Webdunia - Bharat's app for daily news and videos

Install App

ರುಚಿಕರ ಎಣ್ಣೆ ರಹಿತ ಸೀಗಡಿ ಪಡವಲ ಖಾದ್ಯ

Webdunia
ಶನಿವಾರ, 18 ಜನವರಿ 2014 (17:20 IST)
PR
ಬೇಕಾದ ಸಾಮಗ್ರಿಗಳು:

ಪಡವಲ ಕಾಯಿ ಒಂದು, ಕತ್ತರಿಸಿರುವ ಈರುಳ್ಳಿ ಅರ್ಧ ಕಪ್ಪು, ಹಸಿಕೊಬ್ಬರಿ ತುರಿ ಅರ್ಧ ಕಪ್ಪು, ಒಣ ಮೆಣಸು ನಾಲ್ಕು,ಉಪ್ಪು ರುಚಿಗೆ ತಕ್ಕಷ್ಟು, ಧನಿಯಾ ಪುಡಿ ಅರ್ಧ ಸ್ಪೂನ್,ಒಣಗಿರುವ ಸೀಗಡಿ ಒಂದು ಕಪ್, ಅರಿಸಿಣ ಅರ್ಧ ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

ಪಡವಲಕಾಯಿಯ ಬೀಜ ತೆಗೆದು ಚೌಕಾಕಾರದಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸ ಬೇಕು . ಆ ಬಳಿಕ ಒಣಮೆಣಸಿನ ಕಾಯಿ, ಹಸಿಕೊಬ್ಬರಿ ಬೆರಸಿ ಪೇಸ್ಟ್ ಮಾಡಿಕೊಳ್ಳ ಬೇಕು. ಅದಾದ ಬಳಿಕ ಸೀಗಡಿಗಳನ್ನು ತೊಳೆದು ಒಂದು ಕಡೆ ಇಡಿ.ಪಾತ್ರೆಯಲ್ಲಿ ಕತ್ತರಿಸಿಟ್ಟ ಈರುಳ್ಳಿ, ಪಡವಲ ಕಾಯಿ ಚೂರುಗಳು, ಸೀಗಡಿಯನ್ನು ಹಾಕಿ ಅವುಗಳ ಮೇಲೆ ಸ್ವಲ್ಪ ನೀರು ಚುಮುಕಿಸಿ ಅದಕ್ಕೆ ಪ್ಲೇಟ್ ಮುಚ್ಚಿ ಬೇಯಲು ಇಡಿ.

ಅದು ಅರ್ಧ ಬೆಂದ ಬಳಿಕ ಅದಕ್ಕೆ ಧನಿಯಾ ಪುಡಿ, ಅರಿಸಿಣ, ಕೊಬ್ಬರಿ ಮಿಶ್ರಣವನ್ನು ಹಾಗೂ ಉಪ್ಪು ಹಾಕಿ ಮಿಶ್ರ ಮಾಡಿ. ಬಿಸಿಬಿಸಿ ಅನ್ನಕ್ಕೆ ರುಚಿಕರ ಖಾದ್ಯ. ಇದು ಎಣ್ಣೆ ರಹಿತ ಆಹಾರ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ವಿಶ್ವ ಯೋಗ ದಿನಾಚರಣೆ: ಮಕ್ಕಳು ಈ ಆಸನ ಮಾಡುವುದು ಬೆಸ್ಟ್

Show comments