ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು - 1 ಬಟ್ಟಲು ಡಾಲ್ಡಾ - 2 ಚಮಚ ಈರುಳ್ಳಿ - 100 ಗ್ರಾಂ ಹಸಿಮೆಣಸಿನಕಾಯಿ- 6 ಕೊತ್ತಂಬರಿ ಸೊಪ್ಪು - ಸ್ವಲ್ಪ ಕರೀಬೇವು - 2 ಎಸಳು, ಶುಂಠಿ - ಸ್ವಲ್ಪ ಉಪ್ಪು - ರುಚಿಗೆ ತಕ್ಕಷ್ಟು ಎಣ್ಣೆ - ಸ್ವಲ್ಪ. ಪಾಕ ವಿಧಾನ: ಒಂದು ಪಾತ್ರೆಯಲ್ಲಿ ಮೈದಾಹಿಟ್ಟಿಗೆ ಡಾಲ್ಡಾ ಬೆರೆಸಿ ಚೆನ್ನಾಗಿ ಕಲಸಿರಿ. ಈರುಳ್ಳಿ, ಕೊತ್ತಂಬರಿ, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿ, ಎಲ್ಲವನ್ನೂ ಸಣ್ಣದಾಗಿ ಹೆಚ್ಚಿ ಕಲಸಿದ ಮೈದಾಹಿಟ್ಟಿನೊಂದಿಗೆ ಬೆರೆಸಿ. ನಂತರ ಇದಕ್ಕೆ ಸ್ವಲ್ಪ ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ,ಸಣ್ಣ ಸಣ್ಣ ಉಂಡೆಮಾಡಿ ಎಣ್ಣೆಯಲ್ಲಿ ಕರಿಯಿರಿ.ಸಂಜೆ ಕಾಫಿಯೊಂದಿಗೆ ಬಿಸಿಬಿಸಿಯಾಗಿರುವಾಗಲೇ ತಿನ್ನಲು ಚೆನ್ನಾಗಿರುತ್ತದೆ.