ಬೇಕಾಗುವ ಸಾಮಾಗ್ರಿಗಳು :
ಬದನೆ ಕಾಯಿ ಎರಡು
ಹುಣಸೆ ಹಣ್ಣು ಗೋಲಿ ಗಾತ್ರದ್ದು
ರುಚಿಗೆ ಬೇಕಷ್ಟು ಉಪ್ಪು
ಬೆಲ್ಲ ಒಂದು ಗೋಲಿ ಅಳತೆ
ಸಾರಿನ ಹುಡಿ ಎರಡು ದೊಡ್ಡ ಚಮಚ
ಒಗ್ಗರಣೆಗೆ ಎಣ್ಣೆ
ಸಾಸಿವೆ
ಉದ್ದಿನ ಬೇಳೆ
ಕರಿಬೇವು
ಪಾಕ ವಿಧಾನ :
ಬದನೆಯನ್ನು ಚೆನ್ನಾಗಿ ತೊಳೆದು ತೆಳುವಾಗಿ ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿ ಅದಕ್ಕೆ ಬದನೆ ಸೇರಿಸಿ ಹುರಿಯಿರಿ. ನಂತರ ಉಪ್ಪು ಹುಳಿ ಬೆಲ್ಲ ಹಾಕಿ ಸಾರಿನಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲವೂ ಹೊಂದಿಕೊಂಡ ಬಳಿಕ ಒಲೆಯಿಂದ ಕೆಳಗಿರಿಸಿ.