ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು ಎರಡು ಕಪ್, ಅಕ್ಕಿ ಹಿಟ್ಟು ಕಾಲು ಕಪ್,ಅಡಿಗೆ ಸೋಡಾ ಕಾಲು ಟೀ ಸ್ಪೂನ್, ಈರುಳ್ಳಿ ಒಂದು, ಹಸಿಮೆಣಸು ಮೂರು, ಕೊತ್ತಂಬರಿ ಸೊಪ್ಪು,ಸ್ವಲ್ಪ, ಶುಂಠಿ ಚಿಕ್ಕ ಚೂರು, ಬೆಳ್ಳುಳ್ಳಿ ಎಸಳು ಒಂದು, ಬದನೆ ಕಾಯಿ ಮೂರೂ, ಉಪ್ಪು ರುಚಿಗೆ ತಕ್ಕಷ್ಟು ,ಎಣ್ಣೆ
ಮಾಡುವ ವಿಧಾನ: ಬದನೆಕಾಯಿಯನ್ನು ನಾಲ್ಕು ಭಾಗವಾಗಿ ಕತ್ತರಿಸಿ. ಅದನ್ನು ಎಣ್ಣೆಯಲ್ಲಿ ಬಾಡಿಸಿ. ಅದನ್ನು ಪಕ್ಕಕ್ಕೆ ಇಡಿ. ಬಳಿಕ ಕಡಲೆ ಹಿಟ್ಟು , ಅಕ್ಕಿ ಹಿಟ್ಟು , ಅಡುಗೆ ಸೋಡಾ, ಉಪ್ಪು ಹಾಕಿ ಪೇಸ್ಟ್ ನಂತೆ ಕಲಿಸಿಕೊಳ್ಳಿ. ಮಿಕ್ಸಿಯಲ್ಲಿ ಹಸಿಮೆಣಸಿನ ಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಕೊತ್ತಂಬರಿ ಸೊಪ್ಪು , ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಿ. ಈಗಾಗಲೇ ಎಣ್ಣೆಯಲ್ಲಿ ಬಾಡಿಸಿರುವ ಬದನೆ ಕಾಯನ್ನು ತೆಗೆದುಕೊಂಡು ಅದರಲ್ಲಿ ಮಿಕ್ಸಿ ಮಾಡಿದ ಮಿಶ್ರಣವನ್ನು ಸೇರಿಸಿ ಅದನ್ನು ಬಜ್ಜಿ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರೆಯಿರಿ .ನಿಮ್ಮ ಇಷ್ಟದ ಚಟ್ನಿಯೊಂದಿಗೆ ಸೇವಿಸಿ .