ಬೇಕಾದ ಸಾಮಗ್ರಿಗಳು ; ಕತ್ತರಿಸಿದ ಪಡವಲಕಾಯಿ ಒಂದು, ಒಂದು ಬಟ್ಟಲು ಪನ್ನೀರ್ ಮಿಶ್ರಣ , ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಎರಡು ಟೇಬಲ್ ಸ್ಪೂನ್
ಪನೀರ್ ಮಿಶ್ರಣಕ್ಕಾಗಿ ಬೇಕಾದ ಸಾಮಗ್ರಿಗಳು: ತುರಿದ ಪನೀರ್ ಎರಡು ಬಟ್ಟಲು ಕತ್ತರಿಸಿದ ಕ್ಯಾಪ್ಸಿಕಮ್ - ಈರುಳ್ಳಿ , ಅರ್ಧ ಕಪ್, ಟಮೇಟೊ ಕತ್ತರಿಸಿದ್ದು ಒಂದು ಕಪ್, ಕಾರದ ಪುಡಿ ಒಂದು ಟೀ ಸ್ಪೂನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಟೇಬಲ್ ಸ್ಪೂನ್, ಗರಂ ಮಸಾಲ ಅರ್ಧ ಟೀ ಸ್ಪೂನ್ , ಮೆಂತ್ಯದ ಕಾಳು ಸ್ವಲ್ಪ, ಜೀರಿಗೆ ಒಂದು ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಂತೆ.
ಮಾಡುವ ವಿಧಾನ : ಎಣ್ಣೆ ಬಿಸಿಯಾದ ಬಳಿಕ ಅದರಲ್ಲಿ ಜೀರಿಗೆ ಹಾಕಿ ಅದು ಚಿಟುಗುಟ್ಟಿದ ಬಳಿಕ ಮೇಲೆ ತೋರಿಸಿದ ಸಾಮಗ್ರಿಗಳನ್ನು ಹಾಕಿ ಬಾಡಿಸಿ.
ಬಳಿಕ ಪಡವಲ ಕಾಯನ್ನು ಎರಡು ಅಂಗುಲದ ಅಳತೆಯಲ್ಲಿ ಗುಂಡಗೆ ಚೂರುಗಳನ್ನು ಕತ್ತರಿಸಿಕೊಂಡು ಅದರಲ್ಲಿರುವ ಬೀಜಗಳನ್ನು ತೆಗೆದು ಅದರೊಳಗೆ ಎಣ್ಣೆ ಮತ್ತು ಉಪ್ಪು ಬೆರಸಿ. ಅದನ್ನು ಓವೆನ್ ನಲ್ಲಿ ಬೇಯಿಸಿ. ಬಳಿಕ ತೆಗೆಯಿರಿ. ಆರಿದ ನಂತರ ಅದರ ಒಳಗೆ ಅದರಲ್ಲಿ ಈಗಾಗಲೇ ಸಿದ್ಧ ಮಾಡಿರುವ ಪನ್ನೀರ್ ಮಿಶ್ರಣವನ್ನು ಅದರಲ್ಲಿ ಸೇರಿಸಿ.ಹೆಂಚಿನ ಮೇಲೆ, ಎಣ್ಣೆ ಹಾಕಿ ಎರಡು ಕಡೆ ಕಂಡು ಬಣ್ಣ ಬರುವವರೆಗೂ ಬಿಸಿ ಮಾಡಿ ಇದನ್ನು ಚಪಾತಿ ಮತ್ತು ರೊಟ್ಟಿ ಜೊತೆ ಸೇವಿಸ ಬಹುದು.