ಬೂದುಗುಂಬಳ ಕಾಯಿ ಚೂರುಗಳು- ಎಂಟು ಕಪ್ಪು ಬೇಯಿಸಿದ ತೊಗರಿ ಬೇಳೆ ಒಂದು ಕಪ್ಪು ಹುಣಿಸೆ ಹಣ್ಣು- ಒಂದು ಹಿಡಿಯಷ್ಟು ರುಚಿಗೆ ತಕ್ಕಷ್ಟು ಉಪ್ಪು , ಇಂಗು ಸ್ವಲ್ಪ ಅರಿಸಿನ ಚಿಟುಕೆ ಸಾರಿನ ಪುಡಿ ಎರಡು ಟೀ ಸ್ಪೂನ್, ಬೆಲ್ಲ ಒಂದು ಪುಟ್ಟ ಚೂರು ಮಸಾಲೆಗೆ ಬೇಕಾಗುವ ಸಾಮಗ್ರಿಗಳು ಧನಿಯಾ ಎಂಟು ಸ್ಪೂನ್ ಕೊಬ್ಬರಿ ತುರಿ ಎಂಟು ಸ್ಪೂನ್ ಗಳು
ಒಣ ಮೆಣಸಿನ ಕಾಯಿ ನಾಲ್ಕು ಅಕ್ಕಿ ಎರಡು ಟೀ ಸ್ಪೂನ್ ಒಗ್ಗರರಣೆಗೆ :ಸಾಸಿವೆ ಎರಡು ಟೀ ಸ್ಪೂನ್, ಕರಿಬೇವು ಎರಡು ಎಸಳು ಎಣ್ಣೆ ನಾಲ್ಕು ಸ್ಪೂನ್ ಗಳು . ತಯಾರಿಸುವ ವಿಧಾನ:
ಮಸಾಲೆಗಾಗಿ ಸಿದ್ಧ ಮಾಡಿರುವ ಸಾಮಗ್ರಿಗಳನ್ನು ಹುರಿದು ಆರಿಸಿ ಬಳಿಕ ಪುಡಿ ಮಾಡಿ ಟ್ಟುಕೊಳ್ಳ ಬೇಕು. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ, ಕರಿಬೇವು ಬಳಿಕ ಬೆಂದ ಬೇಳೆ ಹಚ್ಚಿಟ್ಟಿರುವ ಬೂದುಕುಂಬಳಕಾಯಿ ಚೂರುಗಳನ್ನು ಹಾಕ ಬೇಕು. ಅದಕ್ಕೆ ಸ್ವಲ್ಪ ನೀರನ್ನು ಬೆರಸಿ ಅದು ಮೆತ್ತಗಾಗುವ ತನಕ ಬೇಯಿಸಿ ಅದರಲ್ಲಿ ಹುಣಿಸೆ ಹಣ್ಣಿನ ರಸ, ಇಂಗು, ಉಪ್ಪನ್ನು ಬೆರಸಿ ಸಣ್ಣ ಉರಿಯಲ್ಲಿ ಬೇಯಿಸಿ,ಬಳಿಕ ಸಿದ್ಧ ಮಾಡಿಟ್ಟರುವ ಪುಡಿಯನ್ನು ಮಿಶ್ರಮಾಡ ಬೇಕು. ಜೊತೆಗೆ ಬೆಲ್ಲವನ್ನು ಬೆರಸಿ ಕುದಿಯುವ ತನಕ ಒಲೆಯ ಮೇಲಿಟ್ಟು ಇಳಿಸ ಬೇಕು. ಬೂದುಕುಂಬಳದ ಮೇಲೋಗರ ಸಿದ್ಧ .