ಬೇಕಾಗುವ ಸಾಮಾಗ್ರಿಗಳು:
ಟೊಮ್ಯಾಟೋ - 4
ನೀರುಳ್ಳಿ - 2
ಹಸಿಮೆಣಸಿನಕಾಯಿ - ರುಚಿಗೆ ತಕ್ಕಷ್ಟು
ತೆಂಗಿನತುರಿ - ಅರ್ಧ ಕಪ್
ಶುಂಠಿ - ಸಣ್ಣ ತುಂಡು
ಮೊಸರು - 4 ಚಮಚ
ಅರಶಿನ ಹುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಯಾವುದೇ ಮಸಾಲಾ ಪುಡಿ - ಸ್ವಲ್ಪ
ಒಗ್ಗರಣೆಗೆ:
ಬೇವಿನ ಎಲೆ - ಸ್ವಲ್ಪ
ಎಣ್ಣೆ - 1 ಚಮಚ
ಸಾಸಿವೆ - ಸ್ವಲ್ಪ
ಪಾಕ ವಿಧಾನ:
ಟೊಮ್ಯಾಟೋ ಮತ್ತು ನೀರುಳ್ಳಿಯನ್ನು ಉದ್ದುದ್ದ ಕತ್ತರಿಸಿರಿ.ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ತುಂಡು ಮಾಡಿದ ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.ಇದಕ್ಕೆ ತುಂಡು ಮಾಡಿದ ಟೊಮ್ಯಾಟೋ, ಉಪ್ಪು ಮತ್ತು ಅರಶಿನ ಪುಡಿ ಬೆರೆಸಿ 5 ನಿಮಿಷ ಹಾಗೇ ಬಿಡಿ.ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಮೊಸರನ್ನು ಮೃದುವಾಗಿ ರುಬ್ಬಿ, ಇದಕ್ಕೆ ಸೇರಿಸಿ.5 ನಿಮಿಷ ನಂತರ ಒಲೆಯಿಂದ ಕೆಳಗಿಳಿಸಿ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.