Webdunia - Bharat's app for daily news and videos

Install App

ಎಲೆಕೋಸು ಸಮೋಸ

Webdunia
" ಬೇಕಾಗುವ ಸಾಮಗ್ರಿ: 250 ಗ್ರಾಂ ಎಲೆಕೋಸು, 100 ಗ್ರಾಂ ಕಡಲೆ ಬೇಳೆ, 200 ಗ್ರಾಂ ಗೋಧಿ ಹಿಟ್ಟು, 50 ಗ್ರಾಂ ಮೈದಾ ಹಿಟ್ಟು, ಒಂದು ಚಮಚ ಖಾರಪುಡಿ, ಅರ್ಧ ಚಮಚ ಚಾಟ್‌ ಮಸಾಲ ಪುಡಿ, ಅರ್ಧ ಕಂತೆ ಕೊತ್ತಂಬರಿ ಸೊಪ್ಪು, 5-6 ಚಮಚ ತೆಂಗಿನ ತುರಿ, ಎರ್ಧ ಚಮಚ ಉದ್ದಿನ ಬೇಳೆ, ಅರ್ಧ ಚಮಚ ಕಡ್ಲೆ ಬೇಳೆ, ಕರಿಯಲು ಎಣ್ಣೆ.

ಮಾಡುವ ವಿಧಾನ: ಗೋಧಿ ಹಿಟ್ಟಿಗೆ ಮೈದಾ ಹಿಟ್ಟು ಸೇರಿಸಿ ಸ್ವಲ್ಪ ಉಪ್ಪು ಮತ್ತು ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಎಲೆಕೋಸು ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಡಿ. ಕಡಲೇಬೇಳೆಯನ್ನು ಬೇಯಿಸಿ ಇಡಿ. ಒಲೆಯ ಮೇಲೆ ಬಾಣಲೆಯಿಟ್ಟು, ಒಂೆದೆರಡು ಚಮಚ ಎಣ್ಣೆ ಹಾಕಿ ಅದು ಕಾದಾಗ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಹೆಚ್ಚಿದ ಎಲೆಕೋಸನ್ನು ಸೇರಿಸಿ ಕಡಿಮೆ ಉರಿಯಲ್ಲಿ ಮೂರ್ನಾಲ್ಕು ನಿಮಿಷ ಬೇಯಿಸಿ. ಇದಕ್ಕೆ ಬೇಯಿಸಿದ ಕಡ್ಲೆಬೇಳೆ ಸೇರಿಸಿ ಮಗುಚಿ. ಖಾರದ ಪುಡಿ, ಚಾಟ್ ಮಸಾಲ ಪುಡಿ ಸೇರಿಸಿ ಒಂದೆರಡು ನಿಮಿಷ ಮಗಚುತ್ತಿದ್ದು, ನಂತರ ಒಲೆಯಿಂದ ಬಾಣಲೆ ಕೆಳಗಿಳಿಸಿ. ಇದಕ್ಕೆ ಹೆಚ್ಚಿದ ಕೊತ್ತಂಬರಿಸೊಪ್ಪು ತೆಂಗಿನ ತುರಿ ಸೇರಿಸಿ ಚೆನ್ನಾಗಿ ಕಲೆಸಿ. ಹಿಟ್ಟನ್ನು ಲಟ್ಟಿಸಿ ಅರ್ಧಕ್ಕೆ ಕತ್ತರಿಸಿ ಕೈಯಲ್ಲಿ ಲಕೋಟೆಯಂತೆ ಮಾಡಿ ಒಳಗೆ ಹೂರಣದ ಉಂಡೆ ತುಂಬಿ ಹಿಟ್ಟನ್ನು ಸೇರಿಸಿ ನಂತರ ಎಣ್ಣೆಯಲ್ಲಿ ಕರಿಯಿರಿ.
"

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ವಿಶ್ವ ಯೋಗ ದಿನಾಚರಣೆ: ಮಕ್ಕಳು ಈ ಆಸನ ಮಾಡುವುದು ಬೆಸ್ಟ್

Show comments