Select Your Language

Notifications

webdunia
webdunia
webdunia
webdunia

ಉದ್ದಿನ ವಡೆ

ಉದ್ದಿನ ವಡೆ
ಉದ್ದಿನ ಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಿ. ಅನಂತರ ಚೆನ್ನಾಗಿ ತೊಳೆದು ಅದರ ನೀರನ್ನು ಸಂಪೂರ್ಣವಾಗಿ ಆರಿಸಿ. ಈ ಉದ್ದಿನ ಬೇಳೆಯನ್ನು ಕೆಂಪು ಮೆಣಸಿನೊಂದಿಗೆ ಹೆಚ್ಚು ನಯವಾಗದಂತೆ ಗಟ್ಟಿಯಾಗಿ ಅರೆಯಿರಿ. ನೀರುಳ್ಳಿ, ಹಸಿ ಮೆಣಸು, ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣನೆ ಹೆಚ್ಚಿದ ನಂತರ ಉದ್ದಿನ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈ ಹಿಟ್ಟನ್ನು ವಡೆಯನ್ನಾಗಿ ಮಾಡಿ ಕುದಿಯುತ್ತಿರುವ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಈ ವಡೆಗಳು ಬಿಸಿ ಅಥವಾ ತಣ್ಣಗಾದ ನಂತರ ಸೇವಿಸಿದರೂ ರುಚಿಯಾಗಿರುವುದು.

Share this Story:

Follow Webdunia kannada