ಬೇಕಾಗುವ ಸಾಮಗ್ರಿಗಳು ಅಕ್ಕಿ ಹಿಟ್ಟು -ಒಂದು ಬಟ್ಟಲು ಬೆಂದ ಅವರೇಕಾಳು - ಅರ್ಧ ಬಟ್ಟಲು ಹಸಿಮೆಣಸಿನ ಕಾಯಿ - ನಾಲ್ಕು ಕತ್ತರಿಸಿದ್ದು ಕೊತ್ತಂಬರಿ ಸೊಪ್ಪು- ಎರಡು ಟೀ ಸ್ಪೂನ್ ಕರಿಬೇವು - ಸ್ವಲ್ಪ ಕಾಯಿ ತೂರಿ -ಮೂರೂ ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು ಜೀರಿಗೆ - ಕಾಲು ಸ್ಪೂನ್ ಎಣ್ಣೆ - ಒಂದು ಬಟ್ಟಲು.
ಮಾಡುವ ವಿಧಾನ : ಮೇಲೆ ತಿಳಿಸಿರುವ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ನೀರನ್ನು ಬೆರಸಿ ಕಲೆಸಿಕೊಳ್ಳಿ. ಹಿಟ್ಟು ಜಾಸ್ತಿ ಅಳ್ಳಕ ವಾಗದೆ ಇರಲಿ. ಅದನ್ನು ಉಂಡೆ ಮಾಡಿಟ್ಟು ಕೊಳ್ಳಿ . ಹೆಂಚನ್ನು ತೆಗೆದು ಕೊಂಡು ಅದರ ಮೇಲೆ ಎಣ್ಣೆ ಹಾಕಿ ತಟ್ಟಿರಿ. ಹದವಾದ ಬಿಸಿಯಲ್ಲಿ ಅದನ್ನು ಬೇಯಿಸಿ. ಬೆಣ್ಣೆ ಇಲ್ಲವೇ ತುಪ್ಪದ ಜೊತೆ ಸೇವಿಸಿ.
(ನೀವು ಪ್ಲಾಸ್ಟಿಕ್ ಹಾಳೆ, ಇಲ್ಲವೇ ಬಾಳೆ ಎಲೆ, ಅಥವಾ ಹೋಳಿಗೆ ಶೀಟಿನ ಮೇಲು ರೊಟ್ಟಿ ತಟ್ಟಿ ಅದನ್ನು ಹೆಂಚಿನ ಮೇಲೆ ಹಾಕಿ ರೊಟ್ಟಿ ಸಿದ್ಧ ಮಾಡ ಬಹುದಾಗಿದೆ.)