Select Your Language

Notifications

webdunia
webdunia
webdunia
webdunia

ವ್ಯಾಲೆಂಟೈನ್ ಅಂದ್ರೆ ಪ್ರೇಮ ಭಿಕ್ಷೆ ಬೇಡುವ ಮನ್ವಂತರ

ವ್ಯಾಲೆಂಟೈನ್ ಅಂದ್ರೆ ಪ್ರೇಮ ಭಿಕ್ಷೆ ಬೇಡುವ ಮನ್ವಂತರ
ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (15:40 IST)
ವ್ಯಾಲೆಂಟನ್ಸ್ ಡೇ ಮತ್ತೆ ಬಂದಿದೆ. ಪ್ರತಿ ವರ್ಷವೂ ವ್ಯಾಲೆಂಟನ್ಸ್ ಡೇ ಸಂದರ್ಭದಲ್ಲಿ "ಹುಟ್ಟು ಪ್ರೀತಿಯ ಗುಂಗು'' ಬೇರೆ ಸಮಯದಲ್ಲಿರುವುದಿಲ್ಲ. ಇದ್ದರೂ ಅಷ್ಟೊಂದು ಪ್ರಾಮುಖ್ಯತೆ ಬರುವುದಿಲ್ಲ. ಕಾರಣ ಪ್ರೇಮಿಗಳ ದಿನದಂದು ಪ್ರೇಮ ಭಿಕ್ಷೆ ಬೇಡುವ ಮನ್ವಂತರ ಆರಂಭವಾಗುವುದು. ಒಂದು ಸುಂದರ ಸ್ವಪ್ನದಂತೆ ಯುವಕರ ಬದುಕಿನಲ್ಲಿ ಬಂದು ಹೋಗುತ್ತದೆ.

ಈ ಪಿಂಕ್ ಫೆಸ್ಟಿವಲ್ ನ್ನು ವಿರೋಧಿಸುವವರಿಗೆ ಹಾಗೂ ಎರೆಂಜಡ್ ಮ್ಯಾರೇಜ್ ಅನ್ನು ಸಾರುವವರಿಗೆ ಮದುವೆ ಬಗ್ಗೆ ಎಷ್ಟು ಗೊತ್ತು. ಮದುವೆಗೂ ಪ್ರೇಮಕ್ಕೂ ಸಂಬಂಧ ಇದೆ ಎಂಬುದು ವ್ಯಾಲೆಂಟನ್ಸ್ ವಿರೋಧಿಗಳಿಗೆ ಗೊತ್ತಿಲ್ಲ. ಶಾಸ್ತ್ರ, ಸಂಪ್ರದಾಯ ಸಪ್ತಪದಿ ಎಲ್ಲವೂ ಆಧುನಿಕತೆಗೆ ಹೊಂದಿಕೊಂಡಿರುವಾಗ ವ್ಯಾಲೆಂಟನ್ಸ್ ಗೆ ವಿರೋಧವೂ ಸಹಜವಾಗಿದೆ.
 
ಸತ್ಯದ ಸಂಗತಿ ಎಂದರೆ ಮದುವೆಯ ಆರಂಭವೇ ಪ್ರೇಮ ಮತ್ತು ಮೋಹ. ಧರ್ಮದ ಮೂಲವೇ ಅದು. ಮದುವೆ ಎಂದರೆ ಸಪ್ತಪದಿ ತುಳಿಯುವುದು ಎಂದು ಹೇಳುವವರಿಗೆ ಇಲ್ಲಿ ರಹಸ್ಯ ತಿಳಿಯಬೇಕು.
 
ಆನೇಕ ದೇವತೆಗಳ ವಿವಾಹ, ಧಾರ್ಮಿಕ ಪುರುಷರ ವಿವಾಹಗಳು ಸಪ್ತಪದಿ ತುಳಿದೇ ನಡೆದ ವಿವಾಹಗಳಾಗಿರಲಿಲ್ಲ. ಒಮ್ಮೆಗೆ ನಡೆದ ಮಿಥುನ ಅಥವಾ ಶೀಲ ಅಪಹರಣದ ಪ್ರಕರಣಗಳು ಇಬ್ಬರನ್ನು ಜೋಡಿಯಾಗಿಸಿದೆ. ಶೀಲಾಪಹರಣ ತಪ್ಪಿಸುವ ಉದ್ದೇಶದಿಂದ ಗುರು ಹಿರಿಯರು "ಸಮಾರಂಭ'' ದ ನಂತರವೇ ಜೋಡಿಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿರುವುದು. ಈ ರೀತಿಯ ಸಮಾರಂಭವೇ ಹೊರತು ವಿವಾಹವಲ್ಲ ಎಂದು ಬಹುತೇಕ ಧರ್ಮಗಳು ಹೇಳುತ್ತವೆ. ಯಾರೋ ಒಬ್ಬ ಯುವಕ ಒಂದು ಹೆಣ್ಣಿನ ಶೀಲದ ಜೊತೆ ಆಟವಾಡುವನೋ ಅವನೇ ಹೆಣ್ಣಿನ ಗಂಡ. ಹೆಣ್ಣಿನ ಕನ್ಯತ್ವವನ್ನು ಬಿಡಿಸಿದವನು ಮಾತ್ರ ಆಕೆಯ ಪತಿಯಾಗುವನು ಎಂಬುದು ಧರ್ಮಗಳ ಸಾರ. ಪ್ರತಿಯೊಂದು ಜೀವಿಯ ಬದುಕು ಕೂಡಾ ಪ್ರಕೃತಿಯ ಅನುಸಾರವಾಗಿ ಸೃಷ್ಠಿಯ ಉದ್ದೇಶವನ್ನು ಹೊಂದಿರುತ್ತದೆ. ಅದರಲ್ಲೂ ಮಾನವನ ಬದುಕು ವಿಕಾಸವಾಗಿದ್ದಾಗಿದ್ದು ಅದರಿಂದಾಗಿ ಸೃಷ್ಠಿಯ ಮಾರ್ಗವಾಗಿರುವ "ಮೊದಲ ಮಿಥುನಕ್ಕೆ'' ದೇವರು ಒಪ್ಪಿಗೆ ಸೂಚಿಸುವಂತೆ ಸೃಷ್ಠಿಯ ಮೂಲ ಹೆಣ್ಣು ಆಗಿರುವುದರಿಂದ ಅವಳು ಕನ್ಯತ್ವವನ್ನು ತೊರೆದಾಗಲೇ ಆಕೆ ಸೃಷ್ಠಿಸಲು ಸಿದ್ದವಾಗುವುದು. ಆದುದರಿಂದಲೇ "ಹೆಣ್ಣು ಯಾವಾಗ ಶೀಲ ಕಳೆದುಕೊಳ್ಳುವಳೋ'' ಆ ಪ್ರಸಂಗವೇ ಮದುವೆ.
 
ಈಗಿನ ಕಂಪ್ಯೂಟರ್ ಯುಗದಲ್ಲಿ ಸ್ವೇಚ್ಚೆ, ಆಡಂಬರ ಹಾಗೂ ಬಹು ಪತ್ನಿತ್ವವನ್ನು ಹೊಂದಿರುವವರು ಅನೇಕರಿದ್ದಾರೆ. ಆದರೆ ಅವರ ಮೊದಲ ಪತಿಯಾಗಿರುವವನು ಮೊದಲ ಮಿಥುನನೇ. ಸನಾತನ ಧರ್ಮವಾಗಿರುವ ಹಿಂದೂ, ಯಹೂದಿ, ಪಾರಸಿ ಸಂಪ್ರದಾಯ ಈಗಲೂ ಕನ್ಯತ್ವದಿಂದ ಬಿಡಿಸಿದವನೇ ಗಂಡನೆಂದು ಹೇಳುತ್ತದೆ. ಸಿಖ್ ಸಂಪ್ರದಾಯದಲ್ಲೂ ಅದುವೇ ಸಾರವಿದೆ. ಜೈನ್ ಧರ್ಮದಲ್ಲಂತೂ ಕನ್ಯತ್ವ ತೊರೆದ ಹುಡುಗನಿಂದ ದೂರವಾಗಿ ಬೇರೊಬ್ಬನನ್ನು ಮದುವೆಯಾದರೆ ಬದುಕು ಸರಿ ಇರುವುದಿಲ್ಲ. ಶಾಂತಿ, ಸಹನೆಗೆ ಹೆಸರಾಗಿರುವ ಜೈನ ಧರ್ಮದಲ್ಲಿ ಶೀಲ ಕಾಪಾಡುವುದೇ ಮೊದಲ ಕೆಲಸ. ಹೆಣ್ಣನ್ನು ಕೆಡಿಸಿದವನೇ ಗಂಡ. ಆತ ಸತ್ತರೆ ಮರು ಮದುವೆ ಅಸಾಧ್ಯ. ಒಂದು ವೇಳೆ ಆ ಹುಡುಗಿ ಸ್ವೇಚ್ಚೆಯಿಂದ ಬಾಯ್ ಫ್ರೆಂಡ್ ಜೊತೆಗೆ ಮಿಥುನ ಪ್ರಕ್ರಿಯೆ ಮಾಡಿ, ಅದನ್ನು ಮುಚ್ಚಿಟ್ಟರೆ ಅವಳ ಬದುಕು ಅಶಾಂತಿಯಿಂದ ಇರುತ್ತದೆ. ಕೆಲಸದ ಆಳುಗಳು ಹುಡುಗಿಯ ಶೀಲ ಅಪಹರಿಸಿದ ಪ್ರಸಂಗದಲ್ಲಿ ಅದೇ ಹುಡುಗನಿಗೆ ಮದುವೆ ಮಾಡಿಸಬೇಕೆಂಬ ಉದ್ದೇಶದಿಂದ ಸಂಪ್ರದಾಯವಾದಿ ಜೈನರು ಮನೆ ಕೆಲಸಗಳಿಗೆ ಜೈನರನ್ನೇ ನೇಮಿಸುವುದು ಇದೇ ಕಾರಣಕ್ಕಾಗಿ. ದೈವ ಪ್ರಾಪ್ರಿಯಾಗಿ ದೇವರು ಅಶೀರ್ವದಿಸುವುದು ಮೊದಲ ಮಿಥುನಕ್ಕೆ. ಅನಂತರದ ಎಲ್ಲಾ ಗಂಡಂದಿರು ಸುಮ್ಮಗೆ. ಇದು ಸೃಷ್ಠಿಯ ನಿಯಮ. ಇದೇ ನಿಯಮ ಹಿಂದೂ ಸಂಪ್ರದಾಯದಲ್ಲಿ ಇರುವುದು.
 
ಈಗಿನ ಕಾಲದಲ್ಲಿ ಶಾಲಾ- ಕಾಲೇಜುಗಳಲ್ಲೇ ಹುಡುಗಿಯರು ಕನ್ಯತ್ವ ಕಳೆದುಕೊಂಡ ಘಟನೆಗಳು ಸಾವಿರಾರು ಇವೆ. ಅವರೂ ಈ ವಿಷಯವನ್ನು ಮುಚ್ಚಿಟ್ಟು ಹೆಣ್ಣುಗಳಿಗೆ ಮರು ಮದುವೆಯಾದರೂ ಕಷ್ಟಗಳು ಎದುರಾಗುತ್ತದೆ. ಆ ವೇಳೆ ಜ್ಯೋತಿಷಿಗಳ ಮೊರೆ ಹೋದಾಗಲೇ "ಈಗಿನವನು ಗಂಡನಲ್ಲ'' ಎಂದು ಗೊತ್ತಾಗುತ್ತದೆ. ಪೂಜೆಗಳು ಫಲಪ್ರದವಾಗಬೇಕಾದರೆ "ಶೀಲ ಪಡೆದ ಗಂಡನಿದ್ದರೆ ಮಾತ್ರ ಸಾಧ್ಯ''.
 
ಅದರಂತೆಯೇ ಮದುವೆಯಾದರೂ ಶೀಲ ಪಡೆಯದವರು ಆನೇಕರಿದ್ದಾರೆ. ಆದರೆ ಅಶೀರ್ವಾದ ಆ ದಾಂಪತ್ಯಕ್ಕೆ ಸಿಗುವುದಿಲ್ಲ. ಯಾಕೆಂದರೆ ಸೃಷ್ಠಿ ಸತ್ಯವಾಗಿದೆ. ಪ್ರಕೃತಿ ಅಸಮತೋಲನ ಉಂಟಾಗುತ್ತದೆ.
 
ಸಂಪ್ರದಾಯ ಹಾಗೆ ಇರುವಾಗ ಪ್ರೇಮಕ್ಕೆ ಬೆಲೆ ನೀಡಬೇಕೇ ಹೊರತು ವಿವಾಹ ಸಮಾರಂಭಕ್ಕೆ ಅಲ್ಲ. ಪ್ರೇಮವೇ ಮೂಲ ಎಂದಿರುವಾಗ ಅದನ್ನು ಒಪ್ಪಿಕೊಳ್ಳಬೇಕು. ಹಾಗಾಗಿ ವ್ಯಾಲೆಂಟನ್ಸ್ ಮಂತ್ರ ಪಠಿಸುವ ಯುವಕರನ್ನು ತಡೆಯುವ ಮೊದಲು ಅವರಲ್ಲಿ ಧರ್ಮದ ಸಾರವನ್ನು ತಿಳಿಸಬೇಕು. ಹಾಗಾಗಿ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸುವ ಮುನ್ನ ಸಂಪ್ರದಾಯವಾದಿಗಳು ತಮ್ಮ ಹೆಣ್ಣು ಮಕ್ಕಳ ಶೀಲ ಉಳಿಸಲು ಪ್ರಯತ್ನಿಸಬೇಕು. 
 
ವಿದ್ವಾನ್ ಎಸ್.ವಿ. ಜೈನ್
ಜ್ಯೋತಿಷ್ಯ ಶಾಸ್ತ್ರಜ್ಞ
ಜಿನ್, 5 ನೇ ಕ್ರಾಸ್, ಶ್ರೀರಾಮಚಂದ್ರಪುರ
ಬೆಂಗಳೂರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾನಲ್ಲೆ ಮಧುಮಂಚಕೆ..! ಎಲ್ಲಿಗೆ ಕರೆದೊಯ್ಯಲಿ ನಲ್ಲೆಯ..?