Publish Date: Sat, 22 Sep 2018 (09:04 IST)
Updated Date: Sat, 22 Sep 2018 (09:05 IST)
ಬೆಂಗಳೂರು: ಸೆಕ್ಸ್ ಲೈಫ್ ಬೋರ್ ಎನಿಸುತ್ತಿದೆಯೇ? ಯಾಕೋ ಯಾವುದೂ ಮೊದಲಿನಷ್ಟು ಖುಷಿ ಕೊಡುತ್ತಿಲ್ಲ ಎನಿಸುತ್ತಿದೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
ಬೆಡ್ ರೂಂ
ಬೆಡ್ ರೂಂ ಖಾಸಗಿ ಕೋಣೆಯಾಗಿಯೇ ಇರಲಿ. ಇಲ್ಲಿ ಕಚೇರಿ ಕೆಲಸಗಳು, ಫೈಲ್, ಲ್ಯಾಪ್ ಟಾಪ್ ಇಟ್ಟಕೊಂಡು ಯಾವುದೋ ಕಚೇರಿ ಎನ್ನುವ ಫೀಲ್ ಕೊಡುವಂತಹ ವಾತಾವರಣ ಸೃಷ್ಟಿಸಬೇಡಿ.
ಉಸಿರಿಗೆ ಉಸಿರು ಸೇರಲಿ!
ರೊಮ್ಯಾನ್ಸ್ ಸಂದರ್ಭದಲ್ಲಿ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಉಸಿರಿಗೆ ಉಸಿರು ತಾಕುವಂತೆ ಕೆಲವು ಕಾಲ ಕಳೆಯಿರಿ. ಇದರಿಂದ ನಿಮ್ಮ ನಡುವಿನ ಇಂಟಿಮೆಸಿ ಜಾಸ್ತಿಯಾಗುತ್ತದೆ.
ರೊಮ್ಯಾಂಟಿಕ್ ಡಿನ್ನರ್
ಒಂದು ಸುಂದರ ರೊಮ್ಯಾಂಟಿಕ್ ಸಂಜೆ ನಿಮ್ಮ ದಿನವನ್ನೇ ಬದಲಾಯಿಸಬಹುದು. ಒಂದು ರೊಮ್ಯಾಂಟಿಕ್ ಡಿನ್ನರ್, ಹಾಡು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ಸಾಕು ಪ್ರಾಣಿಗಳನ್ನು ದೂರವಿಡಿ
ಬೆಡ್ ರೂಂನಲ್ಲಿ ತಮ್ಮ ಮೆಚ್ಚಿನ ನಾಯಿ, ಬೆಕ್ಕಿನ ಜತೆಗೆ ಮಲಗುವ ಅಭ್ಯಾಸವಿದ್ದರೆ ಮೊದಲು ದೂರವಿಡಿ. ಇದು ನಿಮ್ಮಿಬ್ಬರ ನಡುವೆ ಶಿವ ಪೂಜೆ ನಡುವೆ ಕರಡಿ ಬಿಟ್ಟಂತೆ ಮಾಡುವುದು. ಇದರಿಂದ ನಿಮಗೆ ತೊಂದರೆಯೇ ಹೆಚ್ಚು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.