Select Your Language

Notifications

webdunia
webdunia
webdunia
webdunia

ಭಾರತೀಯ ವಾಸ್ತುಶಾಸ್ತ್ರ

ಭಾರತೀಯ ವಾಸ್ತುಶಾಸ್ತ್ರ
, ಸೋಮವಾರ, 10 ಫೆಬ್ರವರಿ 2014 (14:13 IST)
PR
ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ವಿವರಣೆ ನೀಡುತ್ತದೆ. ಗಾಳಿ, ಬೆಳಕು, ನೀರು , ನೆಲ , ಆಕಾಶ ಇತ್ಯಾದಿಗಳನ್ನಾಧರಿಸಿ ನಿರ್ಮಾಣದ ಕುರಿತು ವಿವರಣೆ ನೀಡುತ್ತದೆ. ವಾಸ್ತುಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿಯೂ ಪರಿಗಣಿಸಲ್ಪಡುತ್ತದೆ.

ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ. ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.

ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ. ಈ ಮುಂತಾದ ಕಾರ್ಯಗಳನ್ನು ವಾಸ್ತು ನಿರ್ದೇಶಿಸುತ್ತದೆ.

Share this Story:

Follow Webdunia kannada