ಪಾಕಿಸ್ತಾನ, ಇಂಡೊನೇಷಿಯಾ, ಶ್ರಿಲಂಕಾ ಹಾಗೂ ಭಾರತದ ಗುಜರಾತ್, ಓರಿಯಾ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ನೈಸರ್ಗಿಕ ವಿಕೋಪಗಳಲ್ಲಿ ಸಾವಿರಾರು ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದರು.
ಆ ದುರ್ಘಟನೆಯಿಂದ ಅನೇಕರು ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ನೈಸರ್ಗಿಕ ವಿಕೋಪಗಳಗಿಗೂ ವಾಸ್ತು ದೋಷಕ್ಕೂ ಸಂಬಂಧವಿದೆ ಅಂದರೆ ನಂಬುತ್ತೀರಾ?
ಪುರಾತನ ಕಾಲದಲ್ಲಿ ವಾಸ್ತುಶಾಸ್ತ್ರಕ್ಕೆ ಬಹಳ ಮಹತ್ವ ನೀಡಲಾಗಿತ್ತು. ಪ್ರತಿಯೊಂದು ಕೆಲಸಕಾರ್ಯಗಳೂ ವಾಸ್ತುವಿಗೆ ಅನುಗುಣವಾಗಿ ನಡೆಯುತ್ತಿತ್ತು.
ನೈಸರ್ಗಿಕ ವಿಕೋಪಗಳನ್ನು ಕೂಡ ತಡೆಗಟ್ಟುವ ಶಕ್ತಿ ವಾಸ್ತುವಿಗಿತ್ತು ಎಂದು ನಂಬಲಾಗಿತ್ತು. ವಾಸ್ತುಶಾಸ್ತ್ರದ ಪ್ರಕಾರ ಕಟ್ಟಿದ ಮನೆ ಮತ್ತು ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತಿದ್ದ ಕಡೆಗಳಲ್ಲಿ ಇಂತಹ ಅಪಾಯಗಳು ಉಂಟಾಗುತ್ತಿರಲಿಲ್ಲ ಎಂದು ಭಾವಿಸಲಾಗುತ್ತಿತ್ತು.
ಭೂಕಂಪ, ನೆರೆಹಾವಳಿ, ಸುನಾಮಿ ಹೀಗೆ ನೈಸರ್ಗಿಕ ವಿಕೋಪಗಳು ಯಾವುದೇ ಇರಲಿ ಅದರ ಮನ್ಸೂಚನೆಗಳು ಘಟನೆ ಸಂಭವಿಸುವ ಒಂದು ವಾರದ ಮೊದಲೆ ಗೋಚರಿಸತೊಡಗುತ್ತದೆ.
ಈ ಸೂಚನೆಗಳನ್ನು ಪೂರ್ವಬಾವಿಯಾಗಿ ವಾಸ್ತುವಿನಿಂದ ತಿಳಿದುಕೊಳ್ಳಬಹುದು ಹಾಗೂ ಇದರ ಪರಿಣಾಮವನ್ನು ನಿಗ್ರಹಿಸಬಹುದು. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.
ಪ್ರಾಚೀನ ಜನರು ಮಣ್ಣು, ಮರ, ನೀರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಹಾಗೂ ಅವುಗಳಿಗೆ ಪ್ರಾಧಾನ್ಯ ಕಲ್ಪಿಸಿದ್ದರು. ವಾಸ್ತುವಿನ ಮೌಲ್ಯಗಳು ಈ ಅಂಶಗಳನ್ನು ಅವಲಂಬಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಮನುಷ್ಯನ ಜೀವನ ಚಕ್ರದ ಮೇಲೆ ಪ್ರಕೃತಿ ನೇರ ಪರಿಣಾಮ ಬೀರುವುದರಿಂದ, ವಾಸ್ತು ಮೌಲ್ಯಗಳನ್ನು ಪಾಲಿಸುವುದರಿಂದ ಇಂತಹ ಪರಿಣಾಮಗಳಿಂದ ರಕ್ಷಣೆ ಪಡೆಯಬಹುದು ಎನ್ನಲಾಗಿದೆ.
ಮನುಷ್ಯನ ನಾಡಿ ಮಿಡಿತವನ್ನು ಪರೀಕ್ಷಿಸಿ ಆರೋಗ್ಯ ತಿಳಿಯುವಂತೆ, ವಾಸ್ತುವಿನಿಂದ ಮುಂದಾಗಲಿರುವ ಅಪಾಯವನ್ನು ಮೊದಲೇ ತಿಳಿಯಬಹುದು ಮತ್ತು ನಿಗ್ರಹ ಶಕ್ತಿ ರೂಪಿಸಬಹುದು.
ಆದರೆ ವಾಸ್ತುವಿನ ಬಳಕೆಯ ಮೊದಲು ಅದರ ಕುರಿತು ಸರಿಯಾದ ಜ್ಞಾನ ಹೊಂದಿರುವುದು ಅಗತ್ಯ.
-ಜೇಮನ್ ವರ್ಗೀಸ್