ವಾಸ್ತು ಅನುಸರಿಸುವುದರಿಂದ ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು!

ಬುಧವಾರ, 30 ಸೆಪ್ಟಂಬರ್ 2015 (19:10 IST)
ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.
ನಿಮ್ಮ ಮಗುವು-
*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.
 
*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.
 
*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.
 
*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.
 
*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.
 
*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.
 
*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.
 
*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.
 
*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.
 
*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.
 
*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.
 
*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.
 
*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.
 
*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ
 
*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.
 
*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.
 
*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.
 
*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.
 
*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ. 
 
*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ.
 
ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.
 

ವೆಬ್ದುನಿಯಾವನ್ನು ಓದಿ