Select Your Language

Notifications

webdunia
webdunia
webdunia
webdunia

ಪಿಎಂ ಮೋದಿ ಸರಕಾರದ ಬಜೆಟ್ ಚುನಾವಣೆಗೆ ಪೂರಕವಾಗಲಿದೆಯೇ?

ಪಿಎಂ ಮೋದಿ ಸರಕಾರದ ಬಜೆಟ್ ಚುನಾವಣೆಗೆ ಪೂರಕವಾಗಲಿದೆಯೇ?
ನವದೆಹಲಿ , ಮಂಗಳವಾರ, 14 ನವೆಂಬರ್ 2017 (19:19 IST)
ಕೇಂದ್ರದ ಈ ಬಾರಿಯ ಬಜೆಟ್ ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಬುನಾದಿ ಹಾಕಿದೆ. ಮುಂಬರುವ ಮಾನ್ಸೂನ್‌ನಲ್ಲಿ ತೃಪ್ತಿದಾಯಕವಾಗಿದ್ದಲ್ಲಿ ಪಿ ಚಿದಂಬರಮ್ ಅವರು ಮಂಡಿಸಿರುವ ಬಜೆಟ್ ಹಲವು ಕ್ಷೇತ್ರಗಳ ಉತ್ತೇಜನ ಇಲ್ಲ ಅಭಿವೃದ್ದಿಗೆ ಕಾರಣವಾಗಬಹುದು. 
ಬಂಡವಾಳ ಮಾರುಕಟ್ಟೆ 
 
ಸಾಲಪತ್ರ ವ್ಯವಹಾರ ತೆರಿಗೆ ಈ ಬಾರಿ ಬದಲಾವಣೆಗೊಂಡಿಲ್ಲ. ಸಕಾರಾತ್ಮಕವಾಗಿ ಬೆಳವಣಿಗೆ ಕಾಣುತ್ತಿರುವ ಸರಕು ವ್ಯವಹಾರದ ಮೇಲೆ ಪಿ ಚಿದಂಬರಮ್ ತೆರಿಗೆಯ ನೊಗ ಹೇರಿದ್ದಾರೆ. ಅಲ್ಪಾವಧಿ ಬಂಡವಾಳ ಲಾಭಾಂಶದ ಮೇಲೆ ಪ್ರತಿಶತ 15ರಷ್ಟು ತೆರಿಗೆ ವಿಧಿಸಲಾಗಿದೆ. ವಿದೇಶಿ ವಿನಿಮಯ ವ್ಯವಹಾರ ನಿಧಿ ಮತ್ತು ಬಡ್ಡಿದರಗಳ ಕಡಿತದಿಂದ ಶೇರು ಮಾರುಕಟ್ಟೆ ಭವಿಷ್ಯದ ದಿನಗಳಲ್ಲಿ ಅಭಿವೃದ್ದಿ ಸಾಧಿಸುವ ನಿರೀಕ್ಷೆ ಇದೆ. 
 
ಮ್ಯುಚುವಲ್ ಫಂಡ್ 
 
ಕಳೆದ ಬಾರಿಯಂತೆ ಈ ಬಾರಿ ಮ್ಯುಚುವಲ್ ಫಂಡ್ ಕಂಪನಿಗಳು ನೂತನ ಯೋಜನೆಗಳನ್ನು ಪರಿಚಯಿಸಿಲ್ಲ. ದಿರ್ಘಾವದಿ ಬಂಡವಾಳ ಹೂಡಿಕೆದಾರರಿಂದ ಮ್ಯುಚುವಲ್ ಫಂಡ್ ಉದ್ಯಮ ಲಾಭ ಪಡೆಯಬಹುದು. ಅಲ್ಪಾವಧಿ ಬಂಡವಾಳ ಲಾಭಾಂಶದ ಮೇಲೆ ಶೇ 15ರಷ್ಟು ತೆರಿಗೆ ವಿಧಿಸಲಾಗಿರುವ ಕಾರಣ ಅಲ್ಪಾವಧಿ ಬಂಡವಾಳ ವಲಯ ಹಿನ್ನಡೆ ಅನುಭವಿಸಬಹುದು. 
 
ಸಮಾಜ ಕಲ್ಯಾಣ 
 
ಶೈಕ್ಷಣಿಕ ಕಾರ್ಯಕ್ರಮಗಳಿಗೆ 34 ಸಾವಿರ ಕೋಟಿ ರೂ, ಆರೋಗ್ಯ ಕ್ಷೇತ್ರಕ್ಕೆ 16 ಸಾವಿರ ಕೋಟಿ ರೂ ಮತ್ತು ಭಾರತ್ ನಿರ್ಮಾಣ್ ಯೋಜನಗೆ 31 ಸಾವಿರ ಕೋಟಿ ರೂಗಳನ್ನು ಬಜೆಟ್‌ನಲ್ಲಿ ನೀಡಲಾಗಿರುವುದರಿಂದ ಗ್ರಾಮೀಣ ವಸತಿ, ಬಡತನ ರೇಖೆಗಿಂತ ಕೆಳಗಿರುವವರಿಗೆ ಜೀವ ವಿಮೆ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಳ್ಳಬಹುದು.
 
ಕೃಷಿ ಸಾಲ ಮನ್ನಾ 
 
60 ಸಾವಿರ ಕೋಟಿ ರೂಗಳ ಸಾಲ ಮನ್ನಾ ಮುಂಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಆತಂಕದ ಸಂಗತಿ ಎಂದರೆ ಮುಂಬರುವ ಸರಕಾರಗಳು ಇದೇ ರೀತಿಯ ಬಜೆಟ್ ಮಂಡಿಸಲು ಪ್ರಾರಂಭಿಸಿದರೆ ಹಣಕಾಸು ವ್ಯವಸ್ಥೆಯಲ್ಲಿ ವಿತ್ತೀಯ ಕೊರತೆ ಕಾಣಬಹದು. ಬ್ಯಾಂಕು ಸಾಲಗಳ ಮೇಲಿನ ಶೇ 4 ರಷ್ಟು ಮತ್ತು ಬಾಕಿ ಇರುವ ಕೃಷಿ ಸಾಲದ ಮೇಲೆ ಶೇ 25ರಷ್ಟು ರಿಯಾಯಿತಿ ಘೋಷಿಸಲಾಗಿದೆ. ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿರುವುದರಿಂದ ಹಲವು ರಾಜ್ಯ ವಿದ್ಯುತ್ ನಿಗಮಗಳು ನಷ್ಟದಲ್ಲಿ ಸಾಗಿವೆ. ಉಚಿತ ವಿದ್ಯುತ್ ಪೂರೈಕೆಯ ಕಾರಣ ದೇಶದಲ್ಲಿ ಶಕ್ತಿ ಸಂಪನ್ಮೂಲದ ಕೊರತೆ ಕಾಡುತ್ತಿದೆ. 
 
ಸಾಲ ಮನ್ನಾ ವಿಚಾರಕ್ಕೆ ಬಂದಲ್ಲಿ ಹಣವನ್ನು ಈಗಾಗಲೇ ವ್ಯಯವಾಗಿರುವುದರಿಂದ ಹೊಸ ಬೇಡಿಕೆಯನ್ನು ಹುಟ್ಚು ಹಾಕಲಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾನ್ಯ ಬಜೆಟ್ ನಡೆದು ಬಂದ ದಾರಿ