Select Your Language

Notifications

webdunia
webdunia
webdunia
webdunia

7 ವರ್ಷದ ಬಾಲಕಿಗೆ ಝಿಕಾ ವೈರಸ್!

7 ವರ್ಷದ ಬಾಲಕಿಗೆ ಝಿಕಾ ವೈರಸ್!
ಮುಂಬೈ , ಗುರುವಾರ, 14 ಜುಲೈ 2022 (14:14 IST)
ಮುಂಬೈ : ಕೊರೋನಾ ತಣ್ಣಗಾಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಭೀತಿ ಶುರುವಾಗಿದೆ.

ಪಾಲ್ಗರ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಗೆ ಝಿಕಾ ವೈರಸ್ ತಗುಲಿದೆ. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

2021ರ ಜುಲೈನಲ್ಲಿ ಝಿಕಾ ವೈರಸ್ ಮೊದಲ ಪ್ರಕರಣ ಪುಣೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಿಂದ ಮತ್ತಷ್ಟು ಆತಂಕ ಹೆಚ್ಚಿದೆ.  ಒಟ್ಟಿನಲ್ಲಿ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಸೂಕ್ತ ಚಿಕಿತ್ಸೆ ಹಾಗೂ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ರೋಗದ ಲಕ್ಷಣಗಳೇನು..?

– ಸೌಮ್ಯ ಜ್ವರ
– ರ್ಯಾಶ್
– ಕೆಂಪು ಕಣ್ಣು ಅಥವಾ ಕಾಂಜಂಕ್ಟಿವಿಟಿಸ್
– ಸ್ನಾಯು ಮತ್ತು ಕೀಲು ನೋವು
– ತಲೆನೋವು
– ಆಯಾಸ ಅಥವಾ ಅಸ್ವಸ್ಥತೆಯ ಸಾಮಾನ್ಯ ಭಾವನೆ
– ಹೊಟ್ಟೆ ನೋವು

ಈ ರೋಗಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳವರೆಗೆ ಇರುತ್ತವೆ. ಆದರೆ ಒಮ್ಮೊಮ್ಮೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದಿರುವ ಸಾಧ್ಯಗಳು ಕೂಡ ಇವೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸೋದ್ಯಮ ಇಲಾಖೆಗೆ ಟ್ವೀಟ್‌ನಲ್ಲೇ ಉತ್ತರಿಸುತ್ತೇವೆ : ಆನಂದ್‌ ಸಿಂಗ್‌