ಕುಮಾರಸ್ವಾಮಿ ವಿರುದ್ಧ ಜಮೀರ್ ಏಕವಚನದಲ್ಲಿ ವಾಗ್ದಾಳಿ

Webdunia
ಸೋಮವಾರ, 30 ಏಪ್ರಿಲ್ 2018 (18:02 IST)
ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಪರ ಜಮೀರ್ ಅಹಮ್ಮದ್ ಬಿಡದಿ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು. ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು. 
ನನ್ನ ಬಗ್ಗೆ ಮಾತನಾಡ್ಲಿಕ್ಕೆ ಅವ್ನು ಯಾರು? ನಾನು ರಾಮನಗರ ಚನ್ನಪಟ್ಟಣಕ್ಕೆ ಬಂದು ಹೋದ ಮೇಲೆ ಹಣ ಹಂಚಿ ಜನ ಸೇರಿಸಿರೋದು ಯಾರು? 22 ಲಕ್ಷ ಹಣ ಹಂಚಿ ಕುಮಾರಸ್ವಾಮಿ‌ ನಿನ್ನೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾನೆ. ನಾನು ಬಂದಾಗ ತಡರಾತ್ರಿವರೆಗೂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಚನ್ನಪಟ್ಟಣದಲ್ಲಿ ಜಮಾಯಿಸಿದ್ರು.
 
ಕುಮಾರಸ್ವಾಮಿ ಹಣ‌ಕೊಟ್ರು ಸೇರಿದ್ದು 2೦೦ ಜನ ಮಾತ್ರ. ಕುಮಾರಸ್ವಾಮಿ‌ ಹಣಕೊಟ್ಟು ಜನ ಸೇರಿಸ್ತಾನೆ. ಆತನ ಅಭಿಮಾನಕ್ಕೆ ಜನ ಸೇರೋದಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ, ರಾಜ್ಯದ 52ಕ್ಷೇತ್ರದಲ್ಲಿ ಈವರೆಗೆ ಪ್ರಚಾರ ಮಾಡಿದ್ದೇನೆ. ಮೈಸೂರು ಭಾಗದಲ್ಲಿ ನನ್ನ ಸಮುದಾಯದ ಜನ ನನ್ನ ನಂಬಿ ಕಾಂಗ್ರೆಸ್ ಸೇರೋದನ್ನ ನೋಡಿ. ನನ್ನ ಸಮುದಾಯದ ಜನರನ್ನ ತುರುಕರು ಕಾಸುಕೊಟ್ರೆ ಬರ್ತಾರೆ ಅಂತ ಜರಿದಿದ್ದಾರೆ. 
 
ನನ್ನ ಜನ ಕಾಸಿಗೆ ಬದುಕಿಲ್ಲ. ಕೊಂಡುಕೊಳ್ಳಲು ಅವ್ನು ಯಾರು. ಈಗ ಮುಸ್ಲಿಂರನ್ನ ಜರಿದು ಈಗ ನಾನು ಮಾತನಾಡಿಲ್ಲ ಅಂತಾರೆ. ಅವ್ರದು ಹಿಟ್ ಅಂಡ್ ರನ್ ಕೇಸ್ ಇದ್ದಂತೆ. ಯಾವುದನ್ನ ಅವ್ರು ಹೇಳಿ ಒಪ್ಪಿಕೊಂಡಿದ್ದಾನೆ. ಹೇಳೋದನ್ನ ಹೇಳಿ ನಂತ್ರ ನಾನು ಹೇಳೇ ಇಲ್ಲ ಅಂತಾರೆ. ಅಮಿತ್ ಭೇಟಿ ವಿಚಾರ ಕೇಳಿದ್ರೆ ಯಾಕೆ ಕುಮಾರಸ್ವಾಮಿ ಬ್ಯಾ ಬ್ಯಾ ಅಂತಿಲ್ವಾ?  ಹೇಳಿದ್ದನ್ನ ಅವ್ರು ಅವ್ರ ಜಮಾನ್ದಲ್ಲಿ ಸಮರ್ಥನೆ ಮಾಡಿಕೊಂಡಿಲ್ಲ ಎಂದು ಜಮೀರ್ ಹೆಚ್ಡಿಕೆ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ವಿಚಾರಕ್ಕೆ ಕ್ಲೈಮ್ಯಾಕ್ಸ್: ಸಿದ್ದರಾಮಯ್ಯ ದೆಹಲಿ ಯಾತ್ರೆಗೆ ಸಾಥ್ ಕೊಡಲಿರುವವರು ಯಾರು

Gold Price: ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮೋದಿ ಮೆಹಂಗಾಯ್ ಮ್ಯಾನ್, ಪ್ರತಿದಿನ ಪೆಟ್ರೋಲ್ ಬೆಲೆ ಹೆಚ್ಚಿಸಿ ಪಿಕ್ ಪಾಕೆಟ್: ರಣದೀಪ್ ಸುರ್ಜೇವಾಲ, ಡಿಕೆಶಿ ಜಂಟಿ ಹೇಳಿಕೆ

ಮಗುವಿಗಾಗಿ ಈ ಬಡ ತಂದೆ ಸೈಕಲ್ ನಲ್ಲಿ ಮಾಡಿದ ಸೀಟ್ ಯಾವ ಕಾರ್ ಗೂ ಕಮ್ಮಿಯಿಲ್ಲ ಗುರೂ.. Video

ಮುಂದಿನ ಸುದ್ದಿ
Show comments