Publish Date: Wed, 28 Mar 2018 (12:27 IST)
Updated Date: Wed, 28 Mar 2018 (17:52 IST)
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ ತಪ್ಪು ಹೇಳಿಕೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮವೊಂದರಲ್ಲಿ ಮುಜುಗರಕ್ಕೀಡಾಗಬಹುದಾದ ಸಂದರ್ಭ ಎದುರಾಗಿತ್ತು. ಆದರೆ ಅದು ಸ್ವಲ್ಪದರಲ್ಲೇ ತಪ್ಪಿದೆ.
ಅಮಿತ್ ಶಾ ಬಾಯ್ತಪ್ಪಿ ಯಡಿಯೂರಪ್ಪನವರದ್ದು ನಂ.1 ಭ್ರಷ್ಟ ಸರ್ಕಾರ ಎಂದಿದ್ದರು. ಇದು ಕಾಂಗ್ರೆಸ್ ಸೇರಿದಂತೆ ವಿರೋಧಿಗಳಿಂದ ವ್ಯಾಪಕ ಲೇವಡಿಗೊಳಗಾಗಿತ್ತು. ಇಂದು ಎನ್ ಎಸ್ ಯುಐ ಸಂಘಟನೆ ಅಮಿತ್ ಶಾ ಹೇಳಿಕೆಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಪೊಲೀಸರು ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಸ್ವಲ್ಪದರಲ್ಲೇ ಎದುರಾಗಬಹುದಾಗಿದ್ದ ಮುಜುಗರದಿಂದ ಪಾರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ