Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ನ್ಯೂಮೋಕಾಕಲ್ ಲಸಿಕೆ ಏಕೆ ಕಡ್ಡಾಯ?

ಮಕ್ಕಳಿಗೆ ನ್ಯೂಮೋಕಾಕಲ್ ಲಸಿಕೆ ಏಕೆ ಕಡ್ಡಾಯ?
ಮೈಸೂರು , ಬುಧವಾರ, 17 ನವೆಂಬರ್ 2021 (15:04 IST)
ಮೈಸೂರು  :  ಮಕ್ಕಳಲ್ಲಿ ನ್ಯೂಮೋಕಾಲ್ಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳನ್ನು ತಡೆಗಟ್ಟುವ
ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಗೆ  ಮೈಸೂರಿನ  ಸೇಠ್ ಮೋಹನ್ ದಾಸ್ ತುಳಿಸಿದಾಸಪ್ಪ (ತಾಯಿ ಮತ್ತು ಮಕ್ಕಳ) ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಚಾಲನೆ ನೀಡಿದರು.
ಬಳಿಕ ಡಾ.ಕೆ.ಎಚ್. ಪ್ರಸಾದ್ ಮಾತನಾಡಿ, ಈ ಲಸಿಕೆಯ ಒಂದು ಡೋಸಿಗೆ 3 ಸಾವಿರವಾಗುತ್ತಿತ್ತು. ಹೀಗೆ 3 ಡೋಸ್ ಪಡೆದುಕೊಳ್ಳಲು 9 ರಿಂದ 10 ಸಾವಿರ ಆಗುತ್ತಿತ್ತು. ಈಗ ಲಸಿಕೆಯನ್ನು ಸರ್ಕಾರದಿಂದ  ಉಚಿತವಾಗಿ  ನೀಡಲಾಗುತ್ತಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ನೀಡಲಾಗುತ್ತದೆ. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಲಸಿಕೆಯನ್ನು ಮಗುವಿಗೆ ಒಂದೂವರೆ ತಿಂಗಳಿಗೆ, ಮೂರುವರೆ ತಿಂಗಳಿಗೆ ಹಾಗೂ 9ನೇ ತಿಂಗಳಿಗೆ ನೀಡಲಾಗುತ್ತದೆ. ಮಕ್ಕಳು  ಈ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಬಹುದು. ಸಾರ್ವಜನಿಕರು ತಪ್ಪದೇ ತಮ್ಮ ನವಜಾತ ಶಿಶುಗಳಿಗೆ  ಪಿಸಿವಿ  ಲಸಿಕೆ ಹಾಕಿಸಬೇಕು. ಒಂದು ವರ್ಷದಲ್ಲಿ ಜನಿಸುವ ಮಕ್ಕಳಲ್ಲಿ ಸರಾಸರಿ ಶೇ.15 ಮಕ್ಕಳು ನ್ಯೂಮೋನಿಯಾದಿಂದ  ಬಳಲುತ್ತಾರೆ. ನ್ಯೂಮೋನಿಯಾಕ್ಕೆ ತುತ್ತಾದ ಶಿಶುಗಳನ್ನು ಮೆದಳ ಜ್ವರ ಕೂಡ ಬಾಧಿಸುತ್ತದೆ. ಇದರಿಂದ ಶಿಶುಗಳನ್ನು ರಕ್ಷಿಸಲು ಕಡ್ಡಾಯವಾಗಿ ಶಿಶುಗಳಿಗೆ ಪಿಸಿವಿ ಕೊಡಿಸಬೇಕು. ಲಸಿಕೆ ಹಾಕಿಸುವುದರಿಂದ ನವಜಾತ ಶಿಶುಗಳ ಪ್ರಮಾಣ ಕಡಿಮೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು..
•ಮಕ್ಕಳಿಗೆ ಕಡ್ಡಾಯ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಗೆ ಚಾಲನೆ
• ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಚಾಲನೆ 
•ಲಸಿಕೆಯನ್ನು ಮಗುವಿಗೆ ಒಂದೂವರೆ ತಿಂಗಳಿಗೆ, ಮೂರುವರೆ ತಿಂಗಳಿಗೆ ಹಾಗೂ 9ನೇ ತಿಂಗಳಿಗೆ ನೀಡಲಾಗುತ್ತದೆ
•ಮಕ್ಕಳು ಈ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಬಹುದು
•ಸಾರ್ವಜನಿಕರು ತಪ್ಪದೇ ತಮ್ಮ ನವಜಾತ ಶಿಶುಗಳಿಗೆ ಪಿಸಿವಿ ಲಸಿಕೆ ಹಾಕಿಸಬೇಕು


Share this Story:

Follow Webdunia kannada

ಮುಂದಿನ ಸುದ್ದಿ

ನ.26 ಹೈವೇ ಬಂದ್