Select Your Language

Notifications

webdunia
webdunia
webdunia
webdunia

ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO

ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO
ಜಿನೇವಾ , ಸೋಮವಾರ, 4 ಏಪ್ರಿಲ್ 2022 (06:17 IST)
ಜಿನೇವಾ : ಕೊರೊನಾ ಮಹಾಮಾರಿ ವಿರುದ್ಧ ಹೈದರಾಬಾದ್ ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್-19 ಲಸಿಕೆ ಕೋವಾಕ್ಸಿನ್ ಪೂರೈಕೆಯನ್ನು ಸ್ಥಗಿತಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದೆ.

ಲಸಿಕೆ ತಯಾರಾಗುತ್ತಿರುವ ಸ್ಥಳಗಳಲ್ಲಿ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲು ಅನುಮತಿ ನೀಡಲಾಗಿದೆ.

ಹೀಗಾಗಿ ವಿಶ್ವಸಂಸ್ಥೆಯ ಮೂಲಕ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಬ್ಲ್ಯೂಎಚ್ಒ ಸ್ಪಷ್ಟಪಡಿಸಿದೆ. 

ಕೊರೊನಾ ವಿರುದ್ಧ ಈಗಾಗಲೇ ನೀಡಲಾಗಿರುವ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ. ಯಾವುದೇ ಸುರಕ್ಷತೆಯ ಬಗ್ಗೆ ಭಯ ಬೇಡ. ಲಸಿಕೆ ತೆಗೆದುಕೊಳ್ಳುವ ದೇಶಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಆದರೆ, ಸೂಕ್ತ ಕ್ರಮ ಏನು ಎಂಬುದನ್ನು ನಿರ್ಧರಿಸಿಲ್ಲ.

ಪ್ರಸ್ತುತ ರಫ್ತಿಗೆ ಉತ್ಪಾದನೆಯನ್ನು ಸ್ಥಗಿತಗೊಳಿಸುವುದರಿಂದ ಕೋವ್ಯಾಕ್ಸಿನ್ ಪೂರೈಕೆಗೆ ಅಡ್ಡಿಯಾಗುತ್ತದೆ. ಮಾರ್ಚ್ 14 ರಿಂದ 22 ರವರೆಗೆ ಪೋಸ್ಟ್ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್  ತಪಾಸಣೆಯ ನಂತರ ಅಮಾನತು ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರು ಮೊಬೈಲ್ ಕಸಿದಾಗ ಏನು ಮಾಡಬೇಕು ? ಇಲ್ಲಿದೆ ಮಾಹಿತಿ ನೋಡಿ