Select Your Language

Notifications

webdunia
webdunia
webdunia
webdunia

ಯಾವ ಯಾವ ವಲಯದಲ್ಲಿ ಯಾವುದಕ್ಕೆಲ್ಲ ನಿರ್ಬಂಧ?

ಯಾವ ಯಾವ ವಲಯದಲ್ಲಿ ಯಾವುದಕ್ಕೆಲ್ಲ ನಿರ್ಬಂಧ?
ಬೆಂಗಳೂರು , ಮಂಗಳವಾರ, 4 ಜನವರಿ 2022 (09:49 IST)
ರಾಜ್ಯ ಮತ್ತೆ ಲಾಕ್ಡೌನ್ ಆಗುತ್ತಾ ಎಂಬ ಭೀತಿ ಶುರುವಾಗಿದೆ. ಲಾಕ್ಡೌನ್ನಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.
 
ಹಳದಿ ಬಣ್ಣ ವಲಯದಲ್ಲಿ ಮದುವೆಗೆ ಕೇವಲ 200ರಿಂದ 300 ಜನರಿಗೆ ಮಾತ್ರ ಅವಕಾಶ ನೀಡಲು ತಜ್ಞರು ತಿಳಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆ 100ರಿಂದ 200 ಜನರಿಗೆ ಅವಕಾಶ ನೀಡಲು ತಿಳಿಸಿದ್ದಾರೆ.

ಇನ್ನು ಆರೇಂಜ್ ವಲಯದಲ್ಲಿ ಮಾಲ್, ಶಾಂಪಿಂಗ್ ಕಾಂಪ್ಲೆಕ್ಸ್ಗೆ ಬೆಳಿಗ್ಗೆ 6ರಿಂದ ಮಧ್ಯಹ್ನ 1 ರವೆಗೆ ಮಾತ್ರ ಅವಕಾಶ. ಸಿನಿಮಾ, ಸ್ಕೂಲ್, ಪಬ್, ಬಾರ್, ಆಫೀಸ್, ಫ್ಯಾಕ್ಟರಿ, ಸಲೂನ್, ಮೆಟ್ರೋಗಳಲ್ಲಿ ಶೇ.50 ಅವಕಾಶ. ಸ್ವಿಮಿಂಗ್ ಪೂಲ್, ಜಿಮ್ನಲ್ಲಿ ತರಬೇತಿಗೆ ಮಾತ್ರ ಅವಕಾಶ ನೀಡಲು ತಜ್ಞರು ತಿಳಿಸಿದ್ದಾರೆ.

ರೆಡ್ ವಲಯದಲ್ಲಿ ಮಾರುಕಟ್ಟೆ, ಶಾಪಿಂಗ್ ಮಾಲ್ಗೆ ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಮಾತ್ರ ಅವಕಾಶ ನೀಡಬೇಕು. ಸಿನಿಮಾ ಹಾಲ್, ಸಲೂನ್, ಸ್ವಿಮಿಂಗ್ ಪೂಲ್, ಜಿಮ್ ಬಂದ್ ಮಾಡಬೇಕು.

ಸಾರ್ವಜನಿಕ ಸಾರಿಗೆ, ವರ್ಕ್ಶಾಪ್, ಗಾರ್ಡನ್, ಪಾರ್ಕ್, ಪ್ರಾಣಿ ಸಂಗ್ರಹಾಲಯ, ಮನರಂಜನಾ ಪಾರ್ಕ್ ಆರ್ಟ್ ಗ್ಯಾಲರಿ, ಮ್ಯೂಸಿಯಂ, ಮೇಟ್ರೋ ಬಂದ್ ಮಾಡಬೇಕು. ಹೋಟೆಲ್, ಬಾರ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಬೇಕು ಎಂದು ಸಲಹೆ ನೀಡಿರುವ ತಜ್ಞರು, ಶಾಲೆಗಳನ್ನ ಬಂದ್ ಮಾಡಿ ಅನ್ಲೈನ್ ಕ್ಲಾಸ್ ನಡೆಸಲು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ಮೇಲೆ ಈತನಿಗೆ ಅದೆಂಥಾ ಸಿಟ್ಟಿತ್ತೋ..!