Publish Date: Mon, 03 Jan 2022 (07:11 IST)
Updated Date: Mon, 03 Jan 2022 (08:13 IST)
ಸದ್ಯ ದೇಶಾದ್ಯಂತ ಇರುವ ಕೊವಿಡ್ 19 ಲಸಿಕಾ ಕೇಂದ್ರಗಳಲ್ಲಿಯೇ ಇಂದಿನಿಂದ 15-18 ವರ್ಷದವರೆಗಿನವರಿಗೆ ಕೂಡ ಕೊರೊನಾ ಲಸಿಕೆ ನೀಡಲಾಗುತ್ತದೆ.
ಆದರೆ ಮಕ್ಕಳಿಗಾಗಿ ಪ್ರತ್ಯೇಕ ಕೇಂದ್ರವನ್ನೂ ನಿರ್ಮಿಸಿಕೊಳ್ಳಬಹುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾಗಿ, ಸ್ಥಳೀಯ ಆಡಳಿತಗಳು ಎಲ್ಲಿ ವ್ಯವಸ್ಥೆ ಮಾಡಿವೆ ಎಂಬುದನ್ನು ಅವರೇ ತಿಳಿಸುತ್ತಾರೆ.
ವಿವಿಧ ವಯೋಮಾನಗಳವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅದರಲ್ಲಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಈಗಿರುವ ಕೊರೊನಾ ಲಸಿಕೆ ಕೇಂದ್ರದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕ್ಯೂ ಮಾಡಲು ಹೇಳಲಾಗಿದೆ. ಇನ್ನುಳಿದಂತೆ ವಯಸ್ಕರ ಕೊವಿಡ್ 19 ಲಸಿಕೆ ಅಭಿಯಾನಕ್ಕಾಗಿ ಮಾಡಲಾದಂಥ ವ್ಯವಸ್ಥೆಗಳನ್ನೆಲ್ಲ ಮಾಡಲಾಗಿದೆ.